ಐದು ಕಡೆ ಮೋಡ ಬಿತ್ತನೆ
ಬೆಂಗಳೂರು, ಆ.25: ರಾಜ್ಯದಲ್ಲಿ ಮೋಡ ಬಿತ್ತನೆಯ ಕಾರ್ಯ ಮೂರನೇ ದಿನವು ಮುಂದುವರೆದಿದ್ದು, ಒಟ್ಟು 5 ಕಡೆ ಮೋಡ ಬಿತ್ತನೆ ಮಾಡಲಾಗಿದೆ.
ಇಂದು 2 ಬಾರಿ ಹಾರಾಟ ನಡೆಸಿದ ಮೋಡ ಬಿತ್ತನೆ ವಿಮಾನ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಪಶ್ಚಿಮಕ್ಕೆ ಪ್ರಯಾಣಿಸಿ ಒಟ್ಟು 10 ಬೆಂಕಿ ಉಗುಳುವ ಸಾಧನಗಳನ್ನು ಮೋಡಗಳ ಮೇಲೆ ಸಿಂಪಡಿಸಿ ಮೋಡ ಬಿತ್ತನೆ ಕೈಗೊಂಡಿತು.
ಶ್ರವಣಬೆಳಗೊಳ, ಹಳೆ ಬೀಡು, ಹಾಸನ, ಅರಸಿಕೆರೆ, ತಿಪಟೂರು ಕೊನೆಯಲ್ಲಿ ಬೆಂಗಳೂರು ಸಮೀಪದ ದಾಬಸ್ ಪೇಟೆ ಹತ್ತಿರ ತುಮಕೂರು, ದೊಡ್ಡಬಳ್ಳಾಪುರ ಜಂಕ್ಷನ್ ನಲ್ಲಿ ಸುಮಾರು 50 ಚದರ ಮೀಟರ್ ಬಹು ದೊಡ್ಡದಾದ ಮೋಡವೊಂದರ ಮೇಲೆ ಬಿತ್ತನೆ ನಡೆಸಲಾಯಿತು.
ಇದರಿಂದಾಗಿ 1 ರಿಂದ 10 ಮೈಕ್ರಾನ್ ಗಾತ್ರದ ಮಳೆ ಹನಿಗಳನ್ನು 50 ಮೈಕ್ರಾನ್ ಗಾತ್ರಕ್ಕೆ ವೃದ್ಧಿಸುವ ತನ್ಮೂಲಕ ಮಳೆಯ ಪ್ರಮಾಣವನ್ನು ವಿಸ್ತರಿಸುವ ಕ್ರಮದಲ್ಲಿ ಸರಕಾರ ಯಶಸ್ವಿಯಾಗಿದೆ. ನಿನ್ನೆ ಬಿತ್ತನೆ ಕೈಗೊಳ್ಳಲಾದ ಪ್ರದೇಶಗಳಲ್ಲಿ 2 ಮೀಲಿ ಮೀಟರ್ ನಿಂದ 30 ಮಿಲಿ ಮೀಟರ್‌ವರೆಗೂ ಮಳೆ ಸುರಿದಿದೆ ಎಂದು ರಾಜ್ಯ ಪ್ರಕೋಪ ನಿರ್ವಹಣಾ ಘಟಕ ಕಳುಸಿಕೊಟ್ಟಿರುವ ಸಚಿತ್ರ ಅಂಕಿ ಸಂಖ್ಯೆ ಗಳ ಆದಾರದ ಮೇಲೆ ವಿಜಿತವಾಗುತ್ತದೆ. ಮೋಡ ಬಿತ್ತನೆ ಕಾರ್ಯ ಸಂಪೂರ್ಣ ಯಶಸ್ವಿಯತ್ತ ಮುನ್ನುಗುತ್ತಿದು, ನಾಳೆಯಿಂದ ಮೋಡ ಬಿತ್ತನೆ ಮುಂದುವರೆಯಲಿದೆ.
ಗದಗ ಮತ್ತು ಸುರಪುರದಲ್ಲಿ ರಾಡಾರ್ ಸ್ಥಾಪನೆ ಕಾರ್ಯ ನಾಳೆ ಸಂಜೆ ಪೂರ್ಣಗೊಳ್ಳಲಿದ್ದು, ಮುಂದಿನ 2 ದಿನಗಳಲ್ಲಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ.







