ಬಾಕ್ಸ್‌ಆಫೀಸ್‌ನಲ್ಲಿ ಆಮಿರ್-ಅಜಯ್ ಮುಖಾಮುಖಿ

ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಆಮಿರ್ ಖಾನ್ ಹಾಗೂ ಅಜಯ್ ದೇವಗನ್ ಅಭಿನಯದ ಚಿತ್ರಗಳು ಈ ಸಲದ ದೀಪಾವಳಿಯ ವೇಳೆಗೆ ಬಾಕ್ಸ್‌ಆಫೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಹೌದು. ಅಮಿರ್ ಅವರ ‘ಸೀಕ್ರೆಟ್ ಸೂಪರ್‌ಸ್ಟಾರ್’ ಹಾಗೂ ದೇವ್‌ಗನ್ ನಟನೆಯ ‘ಗೋಲ್‌ಮಾಲ್ ಎಗೈನ್’, ಜೊತೆಯಾಗಿ ಬಿಡುಗಡೆಯಾಗಲಿವೆ. ಆದರೆ ತನ್ನ ಚಿತ್ರದ ಯಶಸ್ಸಿಗೆ ಇನ್ನೋರ್ವ ಸೂಪರ್‌ಸ್ಟಾರ್‌ನ ಚಿತ್ರ ಅಡ್ಡಗಾಲಾಗಬಹುದೆಂಬ ಕಳವಳ ಅಮಿರ್‌ಗಿಲ್ಲ. ಯಾಕೆಂದರೆ ದೀಪಾವಳಿಯಲ್ಲಿ ಅನೇಕ ಚಿತ್ರಗಳಿಗೆ ಬಾಕ್ಸ್ ಆಫೀಸ್ ಸಾಧನೆ ಪ್ರದರ್ಶಿಸಲು ಹೇರಳ ಅವಕಾಶವಿದೆಯೆಂದು ಆತ ಭಾವಿಸಿದ್ದಾರೆ. ಅಷ್ಟೇ ಅಲ್ಲ, ಗೋಲ್‌ಮಾಲ್ ಹಾಗೂ ಸೀಕ್ರೆಟ್ ಸೂಪರ್‌ಸ್ಟಾರ್‌ಗಳ ಸ್ಟೋರಿಟ್ರಾಕ್ ತೀರಾ ವಿಭಿನ್ನವಾಗಿರುವುದರಿಂದ, ಎರಡೂ ಸಿನೆಮಾಗಳು ಪರಸ್ಪರ ಪ್ರತಿಸ್ಪರ್ಧಿಗಳಾಗಲಾರವು ಎಂದು ಅಮಿರ್ ಹೇಳಿದ್ದಾರೆ.
ಆಮಿರ್‌ಖಾನ್ ಸಹನಿರ್ಮಾಪಕನೂ ಆಗಿರುವ ಸೀಕ್ರೆಟ್ ಸೂಪರ್‌ಸ್ಟಾರ್ ಚಿತ್ರವು ಹದಿಹರೆಯದ ಮುಸ್ಲಿಂ ಬಾಲಕಿಯೊಬ್ಬಳು ಸಂಗೀತದಲ್ಲಿ ಮೇರುಸಾಧನೆ ಮಾಡಲು ಹಂಬಲಿಸುವ ಕುರಿತಾದ ಕಥಾವಸ್ತುವನ್ನು ಹೊಂದಿದೆ. ಇಷ್ಟಕ್ಕೂ ಈ ಚಿತ್ರದಲ್ಲಿ ಅಮಿರ್ ಪೋಷಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ದಂಗಲ್ ಚಿತ್ರದ ಬಾಲ ನಟಿ ಝೈರಾ ವಾಸಿಮ್ ಈ ಚಿತ್ರದಲ್ಲಿ ಪ್ರಧಾನಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





