ಗರ್ಭ ಧರಿಸುವುದು ಮತ್ತು ಗರ್ಭಪಾತ ಖಾಸಗಿತನಕ್ಕೆ ಸೇರಿದೆ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಆ. 25: ಗರ್ಭ ಧರಿಸಬೇಕೆ ಅಥವಾ ಬೇಡವೇ ಎನ್ನುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ಖಾಸಗಿತನಕ್ಕೆ ಸೇರಿದ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಖಾಸಗಿತನ ಮೂಲಭೂತ ಹಕ್ಕು ಎನ್ನುವ ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ನೀಡಿದ ಒಂಬತ್ತು ಸದಸ್ಯರ ಪೀಠದಲ್ಲಿದ್ದ ಜಸ್ಟಿಸ್ ಜೆ. ಚಲಮೇಶ್ವರ್ ತೀರ್ಪಿನಲ್ಲಿ ಈ ಬಗ್ಗೆ ಹೇಳಿದ್ದಾರೆ.
ಸ್ವಂತ ಜೀವ ಉಳಿಸಬೇಕೆ, ಕೊನೆಗೊಳಿಸಬೇಕೆ ಎನ್ನುವುದು ಕೂಡಾ ಖಾಸಗಿತನದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಖಾಸಗಿತನ ಯಾವುದಕ್ಕೆಲ್ಲ ಇದೆ ಎಂದು ಸುಪ್ರೀಂಕೋರ್ಟು ಪ್ರತ್ಯೇಕವಾಗಿ ಸೂಚಿಸಿಲ್ಲವಾದರೂ ವ್ಯಕ್ತಿಗಳ ಫೋನ್ ಕದ್ದಾಲಿಕೆ, ಇಂಟರ್‍ನೆಟ್ ಹ್ಯಾಕಿಂಗ್, ಏನು ತಿನ್ನಬೇಕೆನ್ನುವ ಹಕ್ಕು, ಗರ್ಭಪಾತ ಇವೆಲ್ಲಕ್ಕೂ ತೀರ್ಪು ಬಾಧಕವಾಗಲಿದೆ ಎಂದು ತಜ್ಞರು ಹೇಳುತ್ತಾರೆ.
ಆಧಾರ್ ಸಹಿತ ಎಲ್ಲ ವಿಷಯಗಳಲ್ಲಿ ತೀರ್ಪು ಹೇಗೆ ಬಾಧಕವಾಗಲಿದೆ ಎನ್ನುವುದನ್ನು ಪರಿಶೀಲಿಸಬೇಕಾಗಿದೆ ಎಂದು ಚಲಮೇಶ್ವರ್ ಹೇಳಿದ್ದಾರೆ.
Next Story





