‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರೆ ಗುಂಡಿಕ್ಕುತ್ತೇವೆ: ವಿವಾದಾತ್ಮಕ ಹೇಳಿಕೆ ನೀಡಿದ ವೆನಿಸ್ ಮೇಯರ್

ಇಟಲಿ, ಆ.25: ‘ಯಾರಾದರೂ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರೆ ಅಲ್ಲೇ ಗುಂಡಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿರುವ ಇಟಲಿಯ ವೆನಿಸ್ ಮೇಯರ್ ವಿವಾದಕ್ಕೀಡಾಗಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ವೆನಿಸ್ ನ ಮೇಯರ್ ಲುಯಿಗಿ ಬ್ರಗ್ನಾರೋ, ವೆನಿಸ್ ಬಾರ್ಸಿಲೋನಕ್ಕಿಂತ ಸುರಕ್ಷಿತವಾಗಿದೆ. ನಾವು ನಮ್ಮ ರಕ್ಷಣೆಯನ್ನು ಮಾಡುತ್ತೇವೆ. ಯಾರಾದರೂ ಸೈಂಟ್ ಮಾರ್ಕ್ಸ್ ಸ್ಕ್ವಾರ್ ನಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರೆ ಅಂತವರಿಗೆ ಗುಂಡಿಕ್ಕಲಾಗುವುದು’ ಎಂದು ಅವರು ಹೇಳಿದ್ದಾರೆ.
ವೆನಿಸ್ ಮೇಯರ್ ವಿವಾದಕ್ಕೀಡಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಅವರು ಕೆಲ ಹೇಳಿಕೆಗಳಿಂದ, ಕೆಲ ಕ್ರಮಗಳಿಂದ ಜನರ ಆಕ್ರೋಶಕ್ಕೀಡಾಗಿದ್ದರು. 2 ವರ್ಷಗಳ ಅವಧಿಗೆ ಮೇಯರ್ ಆಗಿ ಆಯ್ಕೆಯಾದ ನಂತರ ವೆನೆಟಿಯನ್ ಶಾಲೆಗಳ 49 ಪುಸ್ತಕಗಳಿಂದ ತೆಗೆದು ಹಾಕಿದ್ದ ಅವರ ಕ್ರಮ ಭಾರೀ ವಿವಾದ ಸೃಷ್ಟಿಸಿತ್ತು.
Next Story





