21 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ ನಿರಪರಾಧಿಗಳಿಗೆ ಸಿಕ್ಕ ನಷ್ಟ ಪರಿಹಾರ ಏನು ಗೊತ್ತೇ ?

ವಾಷಿಂಗ್ಟನ್, ಆ. 25: ಪಿಶಾಚಿಯನ್ನು ಆರಾಧಿಸಿದ ಆರೋಪದಲ್ಲಿ 21ವರ್ಷ ಜೈಲುಶಿಕ್ಷೆ ಅನುಭವಿಸಿದ ದಂಪತಿಯನ್ನು ಕೋರ್ಟು ಆರೋಪದಿಂದಖುಲಾಸೆಗೊಳಿಸಿದೆ. 21ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಬಳಿಕ ನಿರಪರಾಧಿತ್ವ ಸಾಬೀತಾಗಿದ್ದು, ಇವರಿಗೆ ನಷ್ಟಪರಿಹಾರವಾಗಿ 3.4 ಮಿಲಿಯನ್ ಡಾಲರ್ ಅಂದರೆ ಸುಮಾರು 21 ಕೋಟಿರೂಪಾಯಿ ನಷ್ಟಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಪಿಶಾಚಿಯ ಆರಾಧನೆಯ ಭಾಗವಾಗಿ ಡೇಕೇರ್‍ನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪ್ರಕರಣ ದಾಖಲಾಗಿತ್ತು. 1922ರಲ್ಲಿ ದಂಪತಿಯನ್ನು ಜೈಲಿಗಟ್ಟಲಾಗಿತ್ತು. ಆದರೆ ನಂತರ ನಡೆದ ತನಿಖೆಯಲ್ಲಿ ಅಪರಾಧ ಸಾಬೀತು ಪಡಿಸುವ ಯಾವ ಸಾಕ್ಷ್ಯಗಳು ದೊರಕಿರಲಿಲ್ಲ.
2013ರಲ್ಲಿ ಜೈಲಿನಿಂದ ಬಿಡುಗಡೆಯಾದರೂ ಇಬ್ಬರೂ ನಿರಪರಾಧಿಗಳೆಂದು ತೀರ್ಪು ಕಳೆದ ಜೂನ್‍ನಲ್ಲಿ ಬಂದಿತ್ತು. ನಷ್ಟಪರಿಹಾರ ಲಭಿಸಿದ್ದಕ್ಕೆ ದಂಪತಿಸಂತೋಷ ವ್ಯಕ್ತಪಡಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಬಡತನದಲ್ಲಿ ಇವರು ಬದುಕುತ್ತಿದ್ದರು. ಕ್ರಿಮಿನಲ್ ಹಿನ್ನೆಲೆಯ ದಾಖಲೆಗಳು ಇದ್ದುದರಿಂದ ಇವರಿಗೆ ಕೆಲಸ ದೊರಕಿರಲಿಲ್ಲ.
ಮೂರು ವರ್ಷದ ಹೆಣ್ಣುಮಗು ದಂಪತಿಯ ವಿರುದ್ಧ ಮೊದಲು ಅರೋಪ ಮಾಡಿದ್ದಳು, ನಂತರ ಅಧಿಕಾರಿಗಳ ಸೂಚನೆಯಂತೆ ಡೇ ಕೇರ್ ಸೆಂಟರ್‍ನ್ನು ಮುಚ್ಚಲಾಗಿತ್ತು. ಘಟನೆ ಚರ್ಚೆಯಾದ ಬಳಿಕ ಹಲವಾರು ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿತ್ತು. ಆದರೆ ನಂತರ ನಡೆಸಿದ ತನಿಖೆಯಲ್ಲಿ ಆರೋಪಗಳು ನಿರಾಧಾರವಾಗಿದೆ ಎಂದು ಸಾಬೀತಾಗಿತ್ತು. ಆರೋಪ ಮಗುವಿನ ಭಾವನೆಯಾಗಿತ್ತು ಎಂದು ಸಾಬೀತಾಗಿದೆ.







