ರಸ್ತೆ ಅಪಘಾತ: ಬೈಕ್ ಸವಾರರು ಮೃತ್ಯು

ಮುಂಡಗೋಡ( ಶಿರಸಿ), ಆ. 25 : ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಶಿರಸಿ-ಯಲ್ಲಾಪುರ ರಸ್ತೆಯ ಹುಯಿಗೋಳ ಗ್ರಾಮದ ಹತ್ತಿರ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರರನ್ನು ಶಿರಸಿ ತಾಲೂಕಿನ ದುಂಡಶಿನಗರದ ಶಕೀಲ ಅಬ್ಬಿಗೇರಿ ಹಾಗು ಹಿಂಬದಿ ಸವಾರ ಗಗನ ಬಿ.ಕೆ ಎಂದು ಗುರುತಿಸಲಾಗಿದೆ.
ಯಲ್ಲಾಪುರದಿಂದ ಶಿರಸಿ ಕಡೆ ಹೊರಟಿದ್ದ ಬೈಕ್ ಹುಯಿಲ್‌ಗೋಳ ಹತ್ತಿರ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಯಲ್ಲಾಪುರ ಕಡೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಮುಖಾಮುಖಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





