ಅತ್ಯಾಚಾರಿ ಬಾಬಾ ಗುರ್ಮೀತ್ ನನ್ನು ಮೋದಿ ಹೊಗಳಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಹೊಸದಿಲ್ಲಿ, ಆ.25: ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ಬಾಬಾ ಗುರ್ಮೀತ್ ಸಿಂಗ್ ನನ್ನು ನರೇಂದ್ರ ಮೋದಿಯವರು ಹೊಗಳಿದ್ದ ಟ್ವೀಟೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ವಚ್ಛ ಭಾರತ್ ಅಭಿಯಾನದಲ್ಲಿ ಕೈಜೋಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿ ಅವರು ಟ್ವೀಟ್ ಮಾಡಿದ್ದರು. "ಬಾಬಾ ರಾಮ್ ರಹೀಮ್ ಜಿ ಹಾಗೂ ತಂಡ ಅಭಿನಂದನಾರ್ಹ ಪ್ರಯತ್ನ ನಡೆಸಿದೆ. ಸ್ವಚ್ಛ ಭಾರತ್ ಅಭಿಯಾನದಲ್ಲಿ ಕೈ ಜೋಡಿಸಲು ಭಾರತದಾದ್ಯಂತ ಜನರನ್ನು ಪ್ರೇರೇಪಿಸಲಾಗುವುದು” ಎಂದು ಮೋದಿ ಟ್ವೀಟ್ ಮಾಡಿದ್ದರು.
ಇಷ್ಟೇ ಅಲ್ಲದೆ 2014ರ ಅಕ್ಟೋಬರ್ ನಲ್ಲಿ ನಡೆದಿದ್ದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮೋದಿ, “ನಾನು ಗುರು ಗುರ್ಮೀತ್ ರಾಮ್ ಸಿಂಗ್ ಜಿ ಮಸ್ತಾನ್ ಜಿಯವರಿಗೆ ಹಾಗೂ ಸಚಾ ಸೌದಕ್ಕೆ ಸೆಲ್ಯೂಟ್ ಮಾಡುತ್ತೇನೆ” ಎಂದಿದ್ದರು.
ಗುರ್ಮೀತ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ನರೇಂದ್ರ ಮೋದಿ ಈತನನ್ನು ಹೊಗಳಿದ್ದ ಟ್ವೀಟ್ ವೈರಲ್ ಆಗುತ್ತಿದೆ.
Next Story





