ಶೃಂಗೇರಿ : ವ್ಯಕ್ತಿ ನಾಪತ್ತೆ
ಶೃಂಗೇರಿ, ಆ.26: ವ್ಯಕ್ತಿಯೋರ್ವರು ಪಟ್ಟಣಕ್ಕೆ ತೆರಳಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಶೃಂಗೇತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಂತೂರು ಗ್ರಾಮದ ನಿವಾಸಿ ಮಂಜುನಾಥ್(40) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಇವರು ಶೃಂಗೇರಿ ಪಟ್ಟಣಕ್ಕೆ ತೆರಳಿ ಬರುವುದಾಗಿ ತಿಳಿಸಿ ಹೋದವರು ಮರಳಿ ಬಂದಿಲ್ಲ. ಇವರು ಹೋಗಿದ್ದ ಕೆಎ 18, ಯು 2898 ನೊಂದಾಣಿ ಸಂಖ್ಯೆಯ ಬೈಕ್ ಶೃಂಗೇರಿ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿತ್ತು.
5.4 ಅಡಿ ಎತ್ತರ, ದೃಡಕಾಯ ಶರೀರ, ಆಕಾಶ ನೀಲಿ ಬಣ್ಣದ ಶರಟ್, ಕಪ್ಪು ವರ್ಣದ ಪ್ಯಾಂಟ್ ಧರಿಸಿದ್ದರುಟ್ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಿದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನಿಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story





