Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ರಘು ರೈ

ರಘು ರೈ

ವಾರ್ತಾಭಾರತಿವಾರ್ತಾಭಾರತಿ26 Aug 2017 6:08 PM IST
share
ರಘು ರೈ

ಭಾರತದ ಅಗ್ರಗಣ್ಯ ಛಾಯಾಗ್ರಾಹಕರಲ್ಲಿ ಒಬ್ಬರು ರಘು ರೈ. 1965ರಲ್ಲಿ ಪ್ರಾರಂಭವಾದ ಅವರ ಛಾಯಾಗ್ರಹಣ ಭಾರತದ ಅತಿಮುಖ್ಯ ಸಾಮಾಜಿಕ ಹಾಗೂ ರಾಜಕೀಯ ಮಜಲುಗಳನ್ನು ದಾಖಲಿಸಿದೆ. ಪದ್ಮಶ್ರೀ ಪುರಸ್ಕೃತರಾದ ರಘು ರೈ ಕಳೆದ 5 ದಶಕಗಳ ಭಾರತವನ್ನು ನಮಗೆ ಬಹಳ ಆಸಕ್ತಿದಾಯಕ ಹಾಗೂ ಅರ್ಥಪೂರ್ಣ ಫೋಟೊಗಳ ಮೂಲಕ ಕೊಟ್ಟಿದ್ದಾರೆ. ಅವರದ್ದೇ ಮಾತುಗಳಲ್ಲಿ ಅವರು ತೆಗೆದ ಕೆಲವು ಫೋಟೊಗಳ ಹಿನ್ನೆಲೆ ಹಾಗೂ ಫೋಟೊಗಳನ್ನು ಇಲ್ಲಿ ನೋಡಬಹುದು.

ನಾನು ಇಂದಿರಾ ಗಾಂಧಿ ಪ್ರಧಾನಿಯಾದ ನಂತರದಿಂದ, ಅಂದರೆ 1967ರಿಂದ, ಇಂದಿರಾ ಗಾಂಧಿ ಅವರ ಫೋಟೊಗಳನ್ನು ಸಾಕಷ್ಟು ತೆಗೆದಿದ್ದೇನೆ. ಮುಂದೆ ಯಾವುದೋ ಒಂದು ದಿನ, ಈಕೆ ಯಾರೆಂದು ತಿಳಿಯದ, ಎಂತಹ ಗಟ್ಟಿ ಮಹಿಳೆಯಾಗಿದ್ದರು ಎಂದು ಅರಿಯದವರಿಗೆ ಈ ಫೋಟೊಗಳು.

ಅವುಗಳ ಮೂಲಕ ಏನೊ ಒಂದು ತಿಳಿಸಬಹುದೆಂಬುದು ನನ್ನ ಆಶಯವಾಗಿತ್ತು. ಆಗ ನಾನು, ನನಗೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆಯೆಂದರೆ: ಈ ಫೋಟೊ ಕಾಲದ ಪರೀಕ್ಷೆಯನ್ನು ದಾಟಬಲ್ಲದೇ? ಎಂದು,.

ಇಂದಿರಾ ಗಾಂಧಿಯವರಿಗೆ ಹಿಮಾಲಯವೆಂದರೆ ಬಹಳ ಪ್ರೀತಿ. ಒಮ್ಮೆ ಅವರು ಶಿಮ್ಲಾದಲ್ಲಿದ್ದಾಗ ಅವರ ಫೋಟೊ ತೆಗೆಯಲು ಅನುಮತಿ ಕೇಳಿದೆ. ಅವರ ಸೆಕ್ರೆಟರಿಯಾದ ಶಾರದಾ ಪ್ರಸಾದ್ ಬಹಳ ಒಳ್ಳೆಯ ವ್ಯಕ್ತಿ. ಅವರು ಒಂದು ಫೋಟೊ ಸೆಷನ್‌ನನ್ನು ಏರ್ಪಾಡು ಮಾಡಿದರು. ಇಂದಿರಾರವರು ಹುಲ್ಲು ಹಾಸಿನ ಮೇಲೆ ನಡೆಯುತ್ತಿದ್ದಾಗ ನಾನು ಫೋಟೊ ತೆಗೆದೆ. ಆದರೆ ಸ್ವಲ್ಪ ಸಮಯದ ನಂತರ ನಿಲ್ಲಿಸಿದೆ. ಆಗ ಅವರು ಹಿಂದಿರುಗಿ ‘ಕ್ಯಾ ಹುವಾ’ ? (ಏನು ಆಯಿತು) ಎಂದು ಕೇಳಿದರು.

‘ಯಾಕೊ ಫೋಟೊ ಸರಿಯಾಗಿ ಬರುತ್ತಿಲ್ಲ’ ಎಂದೆ.

‘ಏನು ಮಾಡಬೇಕು ?’ ಎಂದರು.

ಹಿಮಾಲಯದ ದೃಶ್ಯಕ್ಕೆ ಅಡ್ಡವಾಗಿದ್ದ ಒಂದು ಕಲ್ಲಿನ ಕಟ್ಟೆಯ ಮೇಲೆ ನಿಂತುಕೊಳ್ಳುತ್ತೀರಾ, ಫೋಟೊ ತೆಗೆಯುವೆ ಎಂದೆ. ಚೇರು ತರಿಸಿ, ಅದರ ಮೇಲೆ ನಿಂತರು. ಆಗ ಈ ಫೋಟೊ ತೆಗೆದೆ. ಈ ಫೋಟೊ ನನಗೇಕೆ ಚೆಂದವೆನಿಸುತ್ತದೆ ಎಂದರೆ, ಇಂದಿರಾ ಅವರು ತಮ್ಮ ಕೈಗಳನ್ನು ಒಂದು ರೀತಿಯ ಮುದ್ರೆಯಲ್ಲಿ ಇಟ್ಟುಕೊಂಡಿದ್ದಾರೆ.

  

1970ರಲ್ಲಿ ನಾನು ಮದರ್ ತೆರೇಸಾರನ್ನು ಮೊದಲ ಬಾರಿಗೆ ಭೇಟಿಯಾದೆ. ದಿ ಸ್ಟೇಟ್ಸ್‌ಮೆನ್ ಪತ್ರಿಕೆಯ ಸಂಪಾದಕರಾದ ಡೆಸ್‌ಮಂಡ್ ಡೈಗ್ ಅವರು ಕೋಲ್ಕತಾದಿಂದ ಫೋನು ಮಾಡಿ, ನಾನೊಬ್ಬ ಮಹಾ ವ್ಯಕ್ತಿಯನ್ನು ಭೇಟಿಮಾಡಿದೆ, ನೀನೂ ಅವರನ್ನು ಭೇಟಿಯಾಗಿ ಅವರ ಚಿತ್ರಗಳನ್ನು ತೆಗೆಯಬೇಕು ಎಂದರು. ಇದು ನಾನು ಮೊದಮೊದಲು ತೆಗೆದ ಮದರ್ ತೆರೇಸಾ ಅವರ ಚಿತ್ರ. ಅಲ್ಲಿಂದ ಪ್ರಾರಂಭವಾಗಿ, ನಾನು ಅವರಿರುವರೆಗೂ ಅವರೊಡನೆ ಒಡನಾಡುತ್ತಲೇ ಇದ್ದೆ.

ಫೋಟೊ ಪಾಯಿಂಟ್ ಉಷ .ಬಿ.ಎನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X