Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಇನ್ನೂ ವಿಂಡೋಸ್ ಎಕ್ಸ್‌ಪಿ...

ಇನ್ನೂ ವಿಂಡೋಸ್ ಎಕ್ಸ್‌ಪಿ ಬಳಸುತ್ತಿದ್ದೀರಾ? ಕನ್ನಡ ಬಳಕೆಗಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳು

ಡಿಜಿಟಲ್ ಕನ್ನಡ

ಸತ್ಯನಾರಾಯಣ ಎ.ಸತ್ಯನಾರಾಯಣ ಎ.26 Aug 2017 7:42 PM IST
share
ಇನ್ನೂ ವಿಂಡೋಸ್ ಎಕ್ಸ್‌ಪಿ ಬಳಸುತ್ತಿದ್ದೀರಾ? ಕನ್ನಡ ಬಳಕೆಗಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳು

‘ಪದ ತಂತ್ರಾಂಶ’ವನ್ನು ಅನುಸ್ಥಾಪಿಸಿಕೊಂಡು ಬಳಸುವಲ್ಲಿ ನೀವು ಯಶಸ್ವಿಯಾಗಿದ್ದರೆ, ಅದು ನಿಜಕ್ಕೂ ಅಭಿನಂದನೀಯ. ಕೆಲವರು ಇನ್ನೂ ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂ (ಒ.ಎಸ್.) ಅನ್ನು ಬಳಸುತ್ತಿರುವುದರಿಂದ ಅಂತಹ ಕಂಪ್ಯೂಟರುಗಳಲ್ಲಿ ‘ಪದ ತಂತ್ರಾಂಶ’ವನ್ನು ಬಳಸಲು ಅನುವಾದಾಗ ಸಮಸ್ಯೆ ಕಂಡುಬಂದಿದೆ. ಟೈಪ್ ಮಾಡಿದಾಗ ಕನ್ನಡ ಅಕ್ಷರಗಳು ಮೂಡಿಬರುವ ಬದಲಾಗಿ. ಚಿಕ್ಕಚಿಕ್ಕ ಚೌಕಾಕಾರದ ಡಬ್ಬಿಗಳ ಸಾಲುಗಳು ಮೂಡಿಬರುತ್ತವೆ. ಕಂಪ್ಯೂಟರಿಗೆ ಅಕ್ಷರಗಳ ‘ಎನ್‌ಕೋಡಿಂಗ್’ ಅರ್ಥವಾಗುತ್ತಿದೆ, ಆದರೆ, ಆ ಅಕ್ಷರಗಳನ್ನು ಪ್ರದರ್ಶಿಸಲು ‘ಫಾಂಟ್’ ಇಲ್ಲ ಎಂದರ್ಥ. ಇದಕ್ಕೆ ತಕ್ಷಣದ ಪರಿಹಾರವೆಂದರೆ, Arial MS Unicode ಫಾಂಟ್‌ನ್ನು ಆಯ್ಕೆ ಮಾಡಿಕೊಂಡು ಟೈಪ್‌ಮಾಡಬಹುದು. ಈ ಫಾಂಟ್ ನಿಮ್ಮ ಸಿಸ್ಟಂನಲ್ಲಿ ಇಲ್ಲವೆಂದಾದರೆ, ಇಂಟರ್‌ನೆಟ್‌ನಲ್ಲಿ ಹೋಗಿ ಈ ಫಾಂಟನ್ನು ಡೌನ್‌ಲೋಡ್ ಮಾಡಿಕೊಂಡು ವಿಂಡೋಸ್‌ನ ಫಾಂಟ್ ಫೋಲ್ಡರಿನಲ್ಲಿ ಕಾಪಿ ಮಾಡಬಹುದು. ‘ತುಂಗಾ’ ಯುನಿಕೋಡ್ ಫಾಂಟ್‌ನ್ನು ಸಹ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ತುಂಗಾ ಫಾಂಟು ಹಳೆಯ ಆವೃತ್ತಿಯದ್ದಾಗಿದ್ದರೆ ಮಾತ್ರ ಎಕ್ಸ್‌ಪಿ ಜೊತೆ ಅದು ಕೆಲಸ ಮಾಡುತ್ತದೆ ಹೊಸ ಆವೃತ್ತಿಯದ್ದಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.

ವಿಂಡೋಸ್ ಎಕ್ಸ್‌ಪಿ ಮತ್ತು ತದನಂತರದ ಓ.ಎಸ್.ಗಳಲ್ಲಿ ಯುನಿಕೋಡ್ ಎನ್‌ಕೋಡಿಂಗ್ ಸಹಿತ ಕನ್ನಡ ಬಳಕೆಯ ಸೌಲಭ್ಯಗಳನ್ನು ನೀಡಲಾಗಿದೆ. ಎಕ್ಸ್‌ಪಿಯಲ್ಲಿ ಕನ್ನಡ ಭಾಷಾ ಬಳಕೆಗಾಗಿ ಕೆಲವೊಂದು ಇನ್‌ಸ್ಟ್ಟಾಲೇಷನ್‌ಗಳನ್ನು ಮಾಡಿಕೊ ಳ್ಳಬೇಕಾಗುತ್ತದೆ. ಅದಕ್ಕಾಗಿ ಎಕ್ಸ್‌ಪಿ ಸೀಡಿಯನ್ನು ನೀಡುವಂತೆ ಕಂಪ್ಯೂಟರ್ ಕೋರುತ್ತದೆ. ಈಗ ವಿಂಡೋಸ್ ಎಕ್ಸ್‌ಪಿ ಇನ್‌ಸ್ಟ್ಟಾಲೇಷನ್ ಸೀಡಿಗಳು ಸಿಗುವುದೇ ಕಷ್ಟ. ಮೈಕ್ರೋಸಾಫ್ಟ್ ಕಂಪನಿಯು ಎಕ್ಸ್‌ಪಿಗೆ ತಾನು ನೀಡುತ್ತಿದ್ದ ಬಳಕೆದಾರರ ಬೆಂಬಲವನ್ನು ಹಿಂದೆಗೆದುಕೊಂಡಿದೆ.

ವಿಂಡೋಸ್ ಎಕ್ಸ್‌ಪಿ ಇನ್‌ಸ್ಟ್ಟಾಲೇಷನ್ ಸೀಡಿ ನಿಮ್ಮಲ್ಲಿದ್ದರೆ, ಈಗಲೂ ಕನ್ನಡ ಭಾಷಾ ಬಳಕೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು. ವಿಂಡೋಸ್ ಎಕ್ಸ್‌ಪಿಯ ಕಂಟ್ರೋಲ್ ಪ್ಯಾನೆಲ್‌ನಲ್ಲಿನ ‘ರೀಜನಲ್ ಆ್ಯಂಡ್ ಲಾಂಗ್ವೇಜ್ ಆಪ್ಷನ್ಸ್’ ಎಂಬ ವಿಭಾಗದಲ್ಲಿನ ‘ಲಾಂಗ್ವೇಜಸ್’ ಟ್ಯಾಬ್‌ನಲ್ಲಿರುವ ‘ಇನ್ಸ್ಟಾಲ್ ಕಾಂಪ್ಲೆಕ್ಸ್ ಸ್ಕ್ರಿಪ್ಸ್ಟ್’ ಎಂಬುದನ್ನು ಕ್ಲಿಕ್‌ಮಾಡಿ, ಹಲವು ಮಾರ್ಗಸೂಚಿಗಳನ್ನು ಅನುಸರಿಸಿದರೆ ಕನ್ನಡದ ಬಳಕೆಗಾಗಿ ಎಕ್ಸ್‌ಪಿ ಸಜ್ಜುಗೊಳ್ಳುತ್ತದೆ. ‘ತುಂಗಾ’ ಫಾಂಟ್ ಸಹಿತ ಕೆಲವೊಂದು ಫೈಲ್‌ಗಳು ಕಾಪಿಯಾಗುತ್ತವೆ. ಕಂಪ್ಯೂಟರ್ ರಿಬೂಟ್ ಆದನಂತರದಲ್ಲಿ, ಇದೇ ಲಾಂಗ್ಜೇಜ್ ಸೆಟ್ಟಿಂಗ್‌ಗಳಲ್ಲಿ ‘ಆ್ಯಡ್’ ಎಂಬುದನ್ನು ಕ್ಲಿಕ್‌ಮಾಡುವ ಮೂಲಕ ಕನ್ನಡವನ್ನು ಸೇರಿಸಿ ಬಳಕೆ ಆರಂಭಿಸಬೇಕು. ಕನ್ನಡ ಟೈಪ್ ಮಾಡಲು ಎಕ್ಸ್‌ಪಿಯಲ್ಲಿ ‘ಇನ್ಸ್‌ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸವನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಸರಕಾರದ ಶಿಷ್ಟ ವಿನ್ಯಾಸ ಅಥವಾ ಬೆರಳಚ್ಚುಯಂತ್ರದ ವಿನ್ಯಾಸ ಇತ್ಯಾದಿಗಳು ಆವಶ್ಯಕತೆ ಇದೆ ಎಂದಾದರೆ, www.bhashaindia.com ಜಾಲತಾಣದಿಂದ ಕನ್ನಡದ ‘ಐಎಂಇ-1’ (ಇನ್‌ಪುಟ್ ಮೆಥೆಡ್ ಎಡಿಟರ್-1) ಎಂಬುದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಬಹುದು.

ವಿಂಡೋಸ್-ಎಕ್ಸ್‌ಪಿ ಬಳಸುವ ಬಹುತೇಕ ಬಳಕೆದಾರರಿಗೆ ಅದರಲ್ಲಿ ಕನ್ನಡವನ್ನು ಅಳವಡಿಸಿ ನೀಡಲಾಗಿದೆ ಎಂಬ ಕುರಿತಾದ ಪ್ರಾಥಮಿಕ ಮಾಹಿತಿಯೇ ಇರಲಿಲ್ಲ. ಆದ್ದರಿಂದ, ಎಕ್ಸ್‌ಪಿಯಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ ಬಳಸುವವರ ಸಂಖ್ಯೆ ವಿರಳವಾಗಿತ್ತು. ಇಂದು, ವಿಂಡೋಸ್ 7 ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡ ಭಾಷಾ ಬೆಂಬಲ ಪಡೆಯಲು ಅಷ್ಟೊಂದು ಕಸರತ್ತು ಮಾಡುವ ಆವಶ್ಯಕತೆ ಇಲ್ಲ. ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ ‘ಆ್ಯಡ್’ ಕೀಬೋರ್ಡ್ ಎಂಬ ಆಪ್ಷನ್‌ನ್ನು ಆಯ್ದುಕೊಂಡು ಬೇಕಾದ ಭಾಷೆಯನ್ನು ಅಳವಡಿಸಿಕೊಳ್ಳಬಹುದು. ಪ್ರತ್ಯೇಕವಾಗಿ ಒ.ಎಸ್.ಸೀಡಿಯನ್ನೇನೂ ಅದು ಕೇಳುವುದಿಲ್ಲ. ವಿಂಡೋಸ್ ಎಕ್ಸ್‌ಪಿಗೂ ಮೊದಲಿನ ಆವೃತ್ತಿಗಳಲ್ಲಿ ಕನ್ನಡದ ಭಾಷಾ ಬೆಂಬಲ ಇರಲಿಲ್ಲ. ನಮ್ಮ ಸ್ಥಳೀಯ ತಂತ್ರಾಂಶ ತಯಾರಕರು ಕನ್ನಡಿಗರ ಆವಶ್ಯಕತೆಗಳ ಅನುಸಾರ ಕಾಲಕಾಲಕ್ಕೆ ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿ ನೀಡಿದರು.

ಮೈಕ್ರೋಸಾಫ್ಟ್ ವಿಂಡೋಸ್ ಓ.ಎಸ್.ನ ಮೇಲೆ ಕಾರ್ಯನಿರ್ವಹಿಸುವ, ಫಾಂಟುಗಳು ಎಂದು ಕರೆಯಲಾಗುವ ಕನ್ನಡದ ಪ್ರತ್ಯೇಕ ‘ಲಿಪಿತಂತ್ರಾಂಶಗಳು’ ಮೊದಲಿಗೆ ಬಳಕೆಗೆ ಬಂದವು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಲಿಪಿತಂತ್ರಾಂಶಗಳೆಂದರೆ; ಪ್ರಕಾಶಕ್ (ಸೊನಾಟ ಕಂಪೆನಿ, ಬೆಂಗಳೂರು), ಶ್ರೀಲಿಪಿ (ಮಾಡ್ಯುಲರ್ ಸಿಸ್ಟಂಸ್, ಪುಣೆ), ಆಕೃತಿ (ಸೈಬರ್‌ಸ್ಕೇಪ್ ಮಲ್ಟಿಮೀಡಿಯಾ ಲಿ., ಬೆಂಗಳೂರು), ವಿನ್‌ಕೀ (ಎಸ್.ಆರ್.ಜಿ.), ಸುರಭಿ (ಆ್ಯಪಲ್ ಸಾಫ್ಟ್, ಬೆಂಗಳೂರು) ಕೈರಳಿ (ಬಿಯಾನ್ ಕಂಪ್ಯೂಟರ್ಸ್‌) ಪುಣೆಯ ಸಿಡ್ಯಾಕ್‌ನ ‘ಐಲೀಪ್ ಇತ್ಯಾದಿಗಳು.

ಪ್ರಸ್ತುತ, ಲಭ್ಯವಿರುವ ಉಚಿತ ಕನ್ನಡ ಲಿಪಿತಂತ್ರಾಂಶಗಳೆಂದರೆ; ಕನ್ನಡ ಗಣಕ ಪರಿಷತ್ತು ತಯಾರಿಸಿರುವ ‘ನುಡಿ’ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುವೆಂಪು ತಂತ್ರಾಂಶ ಮತ್ತು ಕನ್ನಡದ ಉತ್ಸಾಹಿ ತಂತ್ರಜ್ಞರಾದ ಲೋಹಿತ್ ಡಿ.ಶಿವಮೂರ್ತಿ ಅಭಿವೃದ್ಧಿಪಡಿಸಿರುವ ಯುನಿಕೋಡ್ ಫಾಂಟ್ ಬೆಂಬಲಿತ ಪದ ಲಿಪಿತಂತ್ರಾಂಶ. ‘ಬರಹ’ ಮೊದಲಿಗೆ ಉಚಿತ ವಾಗಿತ್ತು ಈಗ ಅದನ್ನು ಬಳಸಲು ಹಣ ನೀಡಬೇಕಾಗಿದೆ.

share
ಸತ್ಯನಾರಾಯಣ ಎ.
ಸತ್ಯನಾರಾಯಣ ಎ.
Next Story
X