ಅನಾಹುತಗಳಿಗೆ ಸಿಲುಕದಂತೆ ಮನೆ ನಿರ್ಮಿಸಿ: ಪೂರ್ಣಿಮಾ ಶ್ರೀನಿವಾಸ್
ಬೆಂಗಳೂರು, ಆ. 26: ತಗ್ಗು ಪ್ರದೇಶಗಳನ್ನು ಹೊರತು ಪಡಿಸಿ ಸೂಕ್ತ ಸ್ಥಳದಲ್ಲಿ ಮನೆ ಕಟ್ಟುವ ಮೂಲಕ ಮಳೆಯಿಂದಾಗುವ ಅನಾಹುತಗಳಿಂದ ದೂರವಿರಬೇಕು ಎಂದು ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.
ಕೆ.ಆರ್.ಪುರದ ಎಸ್.ಆರ್.ಬಡಾವಣೆಯಲ್ಲಿ ಬಿಬಿಎಂಪಿ ಅನುದಾನದ 65ಲಕ್ಷ ರೂ.ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕೆ.ಆರ್.ಪುರ ವಾರ್ಡ್‌ನಲ್ಲಿ ಮಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ತಗ್ಗು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಯಾವುದೇ ಅನಾಹುತ ಸಂಭವಿಸುದಂತೆ ನೋಡಿಕೊಳ್ಳಲಾಗುವುದು. ಮನೆಗಳ ಬಳಿಯಿರುವ ಚರಂಡಿಗಳಲ್ಲಿ ಹೂಳು ಶೇಖರಣೆಯಾಗಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕೆ.ಆರ್.ಪುರ ವಾರ್ಡ್‌ನ ಅಜಿತ್ ಬಡಾವಣೆ, ಎಚ್‌ವಿಆರ್ ಬಡಾವಣೆ, ನಿಸರ್ಗ ಬಡಾವಣೆಗಳಿಗೆ ನೀರು ನುಗ್ಗುವ ಮನೆಗಳಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ತುರ್ತು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸಹಕಾರವಿದ್ದರೆ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಈ ವೇಳೆ ವಾರ್ಡ್‌ನ ಅಧ್ಯಕ್ಷ ಜಿಮ್ ರಮೇಶ್, ಸಚ್ಚಿದಾನಂದ ಮೂರ್ತಿ, ಜೆಸಿಬಿ ಅಂಥೋಣಿ ಮತ್ತಿತರರಿದ್ದರು.







