ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿ: 8 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ

ಜಮ್ಮು ಕಾಶ್ಮೀರ, ಆ.26: ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ 8 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಐವರು ಗಾಯಗೊಂಡಿದ್ದಾರೆ.
ನಾಲ್ವರು ಪೊಲೀಸರು ಹಾಗೂ ನಾಲ್ವರು ಸಿಆರ್ ಪಿಎಫ್ ಜವಾನರು ಹುತಾತ್ಮರಾಗಿದ್ದಾರೆ. ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಮುಂಜಾನೆ 3:40 ಸುಮಾರಿಗೆ ನಗರದ ಪೊಲೀಸ್ ಲೈನ್ ನೊಳಕ್ಕೆ ನುಗ್ಗಿದ್ದ ಉಗ್ರರು ದಾಳಿ ನಡೆಸಿದ್ದರು. ಗ್ರೆನೇಡ್ ಹಾಗೂ ಗನ್ ಗಳ ಮೂಲಕ ಅವರು ದಾಳಿ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Next Story





