ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುವ ವರ್ಷಧಾರೆ ಜೀವರಾಶಿಗಳಿಗೆ ಆಸರೆ
ಚಿಕ್ಕಮಗಳೂರು, ಆ.26: ನಿಸರ್ಗದ ಪ್ರಯೋಗ ತಾಣವೋ ಎಂಬಂತ್ತಿರುವ ಪ್ರಕೃತಿ ಮಡಿಲಿನ ಜಿಲ್ಲೆಯಲ್ಲಿ ಸಮೃದ್ಧ ವರ್ಷದಾರೆಯಿಂದಾಗಿ ಜೀವರಾಶಿಗಳಿಗೆ ಆಸರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾದರೆ ಕೃಷಿಗೆ ಕೆರೆ ಕಟ್ಟೆಗಳು, ಜಲಾಶಯಗಳ ಭರ್ತಿಗೆ ಹಾಗೂ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಅದರೆ ಪ್ರಸ್ತುತ ಸಾಲಿನ ಮಳೆಯ ಕೊರತೆಯಿಂದಾಗಿ ಕೊಂಚ ಹಿನ್ನೆಡೆಯಾಗಿದೆ.
ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆಯಾದರೆ ಮೈದಾನ ಪ್ರದೇಶವಾದ ಕಡೂರು ತಾಲೂಕಿನಲ್ಲಿ ಅತೀ ಕಡಿಮೆಯಾಗುತ್ತದೆ. ಪಶ್ಚಿಮ ಘಟಕ್ಕೆ ಹೊಂದಿಕೊಂಡಿರುವ ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಎಂದರೆ ವರ್ಷಕ್ಕೆ 369.5 ಸೆಂ.ಮೀ, ಆದರೆ ಮೈದಾನ ಪ್ರದೇಶವಾದ ಕಡೂರು ತಾಲ್ಲೂಕಿನಲ್ಲಿ 60.36 ಸೆಂ.ಮೀ ಗಳಾಗುತ್ತದೆ. ವರ್ಷದ ಹೆಚ್ಚು ಭಾಗ ಮಳೆ ಮುಂಗಾರು ಮಾರುತದಿಂದ ಪ್ರಾರಂಭವಾಗಿ ಜೂನ್ ತಿಂಗಳಿಂದ ಸೆಪ್ಟೆಂಬರ್ ಅವಧಿಯಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ 2015ರಲ್ಲಿ 97.6 ಸೆ.ಮೀ ಮತ್ತು 2016ರಲ್ಲಿ 56.8 ಮಳೆಯಾಗಿದ್ದರೆ ಪ್ರಸ್ತುತ 2017 ರಲ್ಲಿ ಈವರೆಗೆ 53 ಸೆಂ.ಮೀ ಮಳೆಯಾಗಿದೆ. ಕಡೂರು ತಾಲೂಕಿನಲ್ಲಿ 2015ರಲ್ಲಿ 74.6 ಸೆ.ಮೀ., ಮತ್ತು 2016ರಲ್ಲಿ 32.7 ಸಎ.ಮೀ. ಮಳೆಯಾಗಿದೆ. ಪ್ರಸ್ತುತ 2017ರಲ್ಲಿ ಈವರೆಗೆ 19.2 ಸೆಂ.ಮೀ ಮಳೆಯಾಗಿದೆ. ಕೊಪ್ಪ ತಾಲೂಕಿನಲ್ಲಿ 2015ರಲ್ಲಿ 213.8 ಸೆ.ಮೀ. ಮತ್ತು 2016ರಲ್ಲಿ 201.4 ಸೆ.ಮೀ. ಮಳೆಯಾಗಿದೆ. ಪ್ರಸ್ತುತ 2017ರಲ್ಲಿ ಈವರೆಗೆ 167.9 ಸೆಂ.ಮೀ ಮಳೆಯಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ 2015ರಲ್ಲಿ 224.3 ಸೆ.ಮೀ. ಮತ್ತು 2016ರಲ್ಲಿ 195.6 ಸೆ.ಮೀ. ಮಳೆಯಾಗಿದೆ. ಪ್ರಸ್ತುತ 2017ರಲ್ಲಿ ಈವರೆಗೆ 178.3 ಸೆಂ.ಮೀ ಮಳೆಯಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲಿ 2015ರಲ್ಲಿ 118.3 ಸೆ.ಮೀ. ಮತ್ತು 2016ರಲ್ಲಿ 97.1 ಸೆ.ಮೀ. ಮಳೆಯಾಗಿದೆ. ಪ್ರಸ್ತುತ 2017ರಲ್ಲಿ ಈವರೆಗೆ 80.2 ಸೆಂ.ಮೀ ಮಳೆಯಾಗಿದೆ.
ಶೃಂಗೇರಿ ತಾಲೂಕಿನಲ್ಲಿ 2015ರಲ್ಲಿ 324 ಸೆ.ಮೀ. ಮತ್ತು 2016ರಲ್ಲಿ 246.6 ಸೆ.ಮೀ. ಮಳೆಯಾಗಿದೆ. ಪ್ರಸ್ತುತ 2017 ರಲ್ಲಿ ಈವರೆಗೆ 219.7 ಸೆಂ.ಮೀ ಮಳೆಯಾಗಿದೆ. ತರೀಕೆರೆ ತಾಲೂಕಿನಲ್ಲಿ 2015ರಲ್ಲಿ 116.7 ಸೆ.ಮೀ. ಮತ್ತು 2016ರಲ್ಲಿ 80.2 ಸೆ.ಮೀ. ಮಳೆಯಾಗಿದೆ. ಪ್ರಸ್ತುತ 2017 ರಲ್ಲಿ ಈವರೆಗೆ 47.7 ಸೆಂ.ಮೀ ಮಳೆಯಾಗಿದೆ.
ಜಿಲ್ಲೆಯ ಸರಾಸರಿ ವಾರ್ಷಿಕ ವಾಡಿಕೆ ಮಳೆಯು 190.4 ಸೆಂ.ಮೀ ಇದ್ದು ಪ್ರಸಕ್ತ ಅವಧಿಯವರೆಗೆ ಸರಾಸರಿ ವಾಡಿಕೆ ಮಳೆಯು 145.34 ಸೆಂ.ಮೀ ಆಗಿದೆ. ಪ್ರಸ್ತುತ ಸಾಲಿನಲ್ಲಿ ಈವರೆಗೆ ವಾಸ್ತವಿಕವಾಗಿ 109.47 ಸೆಂ.ಮೀ ಮಳೆಯಾಗಿ ಶೇಕಡವಾರು 75.3 ಆಗಿದೆ. ಮಲೆನಾಡು ಪ್ರದೇಶದಲ್ಲಿ ಅತಿಹೆಚ್ಚು ಆದರೆ ಮೈದಾನ ಪ್ರದೇಶದಲ್ಲಿ ಕಡಿಮೆಯಾಗಿರುವುದು ಕಂಡು ಬರುತ್ತದೆ.







