ಕುರುಕ್ಷೇತ್ರ: 9 ಡೇರಾ ಕೇಂದ್ರಗಳಿಗೆ ಬೀಗ, 2,500 ಲಾಠಿಗಳು ಪತ್ತೆ

ಚಂಡಿಗಡ,ಆ.26: ಜಿಲ್ಲೆಯಲ್ಲಿಯ ಡೇರಾ ಸಚ್ಚಾ ಸೌದಾದ ಒಂಭತ್ತು ಕೇಂದ್ರಗಳಿಗೆ ಶನಿವಾರ ಬೀಗ ಜಡಿಯಲಾಗಿದೆ. ಅಲ್ಲಿದ್ದ ಡೇರಾ ಅನುಯಾಯಿಗಳನ್ನು ತೆರವುಗೊಳಿ ಸಲಾಗಿದ್ದು, 2,500ಕ್ಕೂ ಅಧಿಕ ಲಾಠಿಗಳು ಮತ್ತು ಇತರ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಕುರುಕ್ಷೇತ್ರ ಎಸ್‌ಪಿ ಅಭೀಷೇಕ ಗರ್ಗ್ ಅವರು ತಿಳಿಸಿದರು.
ಜನರನ್ನು ತೆರವುಗೊಳಿಸಿದ ಬಳಿಕ ಹಿಂಸೆಯನ್ನು ತಡೆಯಲು ಡೇರಾ ಕೇಂದ್ರಗಳ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಕೇಂದ್ರಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಕುರುಕ್ಷೇತ್ರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ಗರ್ಗ್ ತಿಳಿಸಿದರು.
Next Story





