ರೈಲು ಢಿಕ್ಕಿ: ಮಹಿಳೆ ಮೃತ್ಯು
ಚಿಕ್ಕಮಗಳೂರು, ಆ. 26: ಹಳಿ ದಾಟುತಿದ್ದ ಮಹಿಳೆಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆಯ ನಾಗೇನ ಹಳ್ಳಿಯಲ್ಲಿ ಇಂದು ನಡೆದಿದೆ.
ನಾಗೇನ ಹಳ್ಳಿ ಗ್ರಾಮದ ನಿವಾಸಿ ರಂಗಮ್ಮ(40) ಮೃತರು ಎಂದು ಗುರುತಿಸಲಾಗಿದೆ. ತರಿಕೇರೆಯ ಪಟ್ಟಣದಿಂದ ಕಾರದ ಪುಡಿ ಮಾಡಿಸಿಕೊಂಡು ರೈಲು ಹಳಿ ದಾಟಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಶಿವಮೊಗ್ಗ ದಿಂದ ಬೆಂಗಳೂರಿಗೆ ಹೋಗುವ ರೈಲು ಢಿಕ್ಕಿಯಾಗಿರುವುದಾಗಿ ತಿಳಿದುಬಂದಿದೆ.
ತರಿಕೇರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story





