ಡ್ರಗ್ಸ್ ಜಾಲದ ಕಿಂಗ್ ಪಿನ್ ಬಂಧನ

ಲಂಡನ್,ಆ.26: ಅಂತಾರಾಷ್ಟ್ರೀಯ ಮಾದಕದ್ರವ್ಯ ಕಳ್ಳಸಾಗಣೆ ಜಾಲದ ‘ಸುಲ್ತಾನ್’ ಎಂದೇ ಹೆಸರಾದ ಪಾಕ್ ಪ್ರಜೆ, ಮುಹಮ್ಮದ್ ಆಸೀಫ್ ಹಾಫೀಝ್ ನನ್ನು ಬ್ರಿಟನ್ ಹಾಗೂ ಅಮೆರಿಕದ ಅಧಿಕಾರಿಗಳು ಶನಿವಾರ ಲಂಡನ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯೊಂದರಲ್ಲಿ ಬಂಧಿಸಿದ್ದಾರೆ. ಬ್ರಿಟಿಶ್ ಪೊಲೀಸರು ಆತನನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ.
58 ವರ್ಷದ ಹಾಫೀಜ್ ನೇತೃತ್ವದ ಈ ಜಾಲವು ಯುರೋಪ್, ಆಫ್ರಿಕಾ, ಏಶ್ಯ ಹಾಗೂ ಉತ್ತರ ಅಮೆರಿಕದಲ್ಲಿ ಕಾರ್ಯಾಚರಿಸುತ್ತಿದ್ದು, ಹೆರಾಯಿನ್, ಎಫಿಡರೆನ್ ಇತ್ಯಾದಿ ಮಾದಕದ್ರವ್ಯಗಳನ್ನು ಉತ್ಪಾದನೆ ಹಾಗೂ ಕಳ್ಳಸಾಗಣೆಯನ್ನು ನಡೆಸುತ್ತಿತ್ತೆಂದು ಬ್ರಿಟಿಶ್ ಪೊಲೀಸರು ತಿಳಿಸಿದ್ದಾರೆ. ಪಾಕ್ ಹಾಗೂ ಅಫ್ಘಾನಿಸ್ತಾನದಿಂದ ಕೆನ್ಯಾಗೆ ಹೆರಾಯನ್ ಮಾದಕದ್ರವ್ಯವನ್ನು ಭಾರೀ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡುತ್ತಿರುವ ಜಾಲದ ಸೂತ್ರಧಾರಿ ಹಾಫೀಜ್ ಎಂಬ ಮಾಹಿತಿ ಖಚಿತವಾದ ಬಳಿಕ ಬ್ರಿಟನ್‌ನ ರಾಷ್ಟ್ರೀಯ ಅಪರಾಧ ನಿಗ್ರಹ ಸಂಸ್ತೆ (ಎನ್‌ಸಿಎ) ಹಾಗೂ ಅಮೆರಿಕದ ಮಾದಕದ್ರವ್ಯ ಜಾರಿ ನಿರ್ದೇಶನಾಲವು,ಆತನನ್ನುವಿಚಾರಣೆಗೊಳುಪಡಿಸಿತ್ತು.





