ಮಂಡ್ಯ: ಮಹಿಳೆಯರ ಸರ ಅಪಹರಣ

ಮಂಡ್ಯ, ಆ.26: ಇಲ್ಲಿನ ಗುತ್ತಲು ಬಡಾವಣೆಯ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗಣೇಶನ ಹಬ್ಬದ ಸಂಭ್ರಮದಲ್ಲಿ ದೇವರಿಗೆ ತನಿ ಎರೆಯುತ್ತಿದ್ದ
ವೇಳೆ ನಾಲ್ವರು ಮಹಿಳೆಯರ ಚಿನ್ನದ ಸರ ಅಪಹರಿಸಿದ್ದಾರೆ.
ತಾಲೂಕಿನ ಯತ್ತಗದಹಳ್ಳಿಯ ಪುಟ್ಟಸ್ವಾಮಿ ಅವರ ಪತ್ನಿಜಿ.ಕೆ.ಜಯಮ್ಮಅವರ 30 ಗ್ರಾಂ, ಭೂತನ ಹೊಸೂರು ಗ್ರಾಮದ ನಂದೀಶ್ ಎಂಬವರ ಪತ್ನಿಇಂದಿರಾಅವರ 32 ಗ್ರಾಂ, ಚಿಕ್ಕೇಗೌಡ ನದೊಡ್ಡಿಯ ಗೌಡಯ್ಯ ಎಂಬವರ ಪತ್ನಿ ಸುಶೀಲ ಅವರ 30 ಗ್ರಾಂ, ಲಿಂಗಯ್ಯ ಎಂಬವರ ಪತ್ನಿ ಹೊಂಬಾಳಮ್ಮ ಅವರ 26 ಗ್ರಾಂತೂಕದ ಸರವನ್ನು ಕಳ್ಳರು ಎಗರಿಸಿದ್ದಾರೆ.
ಈ ಸಂಬಂಧ ನಾಲ್ವರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





