ಐ.ಕ್ಯೂ.ನಲ್ಲಿ ಐನ್‌ಸ್ಟೀನ್‌ರನ್ನು ಮೀರಿಸಿದ ಭಾರತೀಯ ಬಾಲಕ

ಲಂಡನ್,ಆ.21: ಬ್ರಿಟಿಶ್ ಟಿವಿ ವಾಹಿನಿ, ಚಾನಲ್ 4 ನಡೆಸಿದ ‘ಚೈಲ್ಡ್ ಜೀನಿಯಸ್ (ಬಾಲ ಮೇಧಾವಿ) ರಿಯಾಲಿಟಿ ಶೋನ ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ಬಾಲಕ ರಾಹುಲ್ ಜೋಷಿ ಐ.ಕ್ಯೂ (ಬುದ್ಧಿಮತ್ತೆ)ನಲ್ಲಿ ವಿಶ್ವವಿಖ್ಯಾತ ನೊಬೆಲ್ ಪುರಸ್ಕೃತ ಭೌತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್‌ನನ್ನು ಮೀರಿಸಿದ್ದಾನೆ. 8ರಿಂದ 12 ವರ್ಷ ವಯಸ್ಸಿನೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತನಗೆ ಕೇಳಲಾದ ಎಲ್ಲಾ 14 ಪ್ರಶ್ನೆಗಳಿಗೆ ಅತ್ಯಂತ ನಿಖರವಾದ ಉತ್ತರವನ್ನು ನೀಡುವ ಮೂಲಕ 162 ಅಂಕದ ಐ.ಕ್ಯೂ.ಮಟ್ಟವನ್ನು ಸಾಧಿಸಿದ್ದಾನೆ. ಇದು ವಿಶ್ವವಿಖ್ಯಾತ ವಿಜ್ಞಾನಿಗಳಾದ ಐನ್‌ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ ಅವರ ಐ.ಕ್ಯೂ. ಮಟ್ಟಕ್ಕಿಂತಲೂ ಅಧಿಕವೆಂದು ಭಾವಿಸಲಾಗಿದೆ.
ವಿಶ್ವದ ಅತ್ಯಂತ ಹಳೆಯದಾದ ಐ.ಕ್ಯೂ.ಪ್ರತಿಭಾವಂತರ ಸಂಘ ‘ಮೆನ್ಸಾ’ದ ಪ್ರತಿನಿಧಿಯಾಗಿ ರಾಹುಲ್ ಜೋಶಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದನು.
Next Story





