ಮ್ಯಾನ್ಮಾರ್: ಸೇನೆ-ರೋಹಿಂಗ್ಯ ಘರ್ಷಣೆ; ಕನಿಷ್ಠ 89 ಬಲಿ

ಮೌಂಗ್‌ದಾ,ಆ.26: ಮ್ಯಾನ್ಮಾರ್‌ನ ರಾಖಿನ್ ರಾಜ್ಯದಲ್ಲಿ ಭದ್ರತಾಪಡೆಗಳು ಹಾಗೂ ಶಂಕಿತ ರೋಹಿಂಗ್ಯ ಬಂಡುಕೋರರ ನಡುವೆ ಕಳೆದ ಎರಡು ದಿನಗಳಿಂದ ಭೀಕರ ಕಾಳಗ ನಡೆಯುತ್ತಿದ್ದು, ಕನಿಷ್ಠ 89ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.ಕಾಳಗಕ್ಕೆ ಬೆದರಿ ಸಾವಿರಾರು ಮಂದಿ ದುರ್ಗಮ ಹಳ್ಳಿಗಳಿಗೆ ಪಲಾಯನಗೈಯುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಮ್ಯಾಂಗ್‌ಡಾವ್ ನಗರದ ಬಳಿ ನಿನ್ನೆ ರಾತ್ರಿ ಮೂರು ಗ್ರಾಮಾಧಿಕಾರಿಗಳನ್ನು ಬಂಡುಕೋರರು ಗುಂಡಿಕ್ಕಿ ಹತ್ಯೆಗೈದಿದ್ದರು.
ಕಾಳಗದಲ್ಲಿ 12 ಭದ್ರತಾ ಅಧಿಕಾರಿಗಳು ಹಾಗೂ 77 ಮಂದಿ ಬಂಡುಕೋರರು ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.ಶುಕ್ರವಾರ ಮುಂಜಾನೆ ನೂರಾರು ಬಂಡುಕೋರರು ಬಂಧೂಕುಗಳು ಹಾಗೂ ಗ್ರೆನೇಡ್‌ಗಳಿಂದ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿರುವುದಾಗಿ ಮ್ಯಾನ್ಮಾರ್ ಪೊಲೀಸರು ತಿಳಿಸಿದ್ದಾರೆ.
Next Story





