ಕೊಡಂಗೆ ಶಾಲೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

ಬಂಟ್ವಾಳ, ಆ.27: ಕೊಡಂಗೆಯ ದ.ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಶನಿವಾರ ನಡೆಯಿತು.
ಒಟ್ಟು 18 ಶಾಲಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಬಾಲಕರ ತಂಡದಲ್ಲಿ ಕೊಡಂಗೆ ಶಾಲೆ ಪ್ರಥಮ , ದ್ವಿತೀಯ ಸ್ಥಾನವನ್ನು ದಾರುಲ್ ಇಸ್ಲಾಂ ಶಾಲೆ ಅಕ್ಕರಂಗಡಿ, ಬಾಲಕಿಯರ ತಂಡದಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ ಪ್ರಥಮ ಸ್ಥಾನ ಹಾಗೂ ಬೆಸ್ಟ್ ಇಂಗ್ಲಿಷ್ ಮೀಡಿಯಂ ಶಾಲೆ, ಕೈಕಂಬ ದ್ವಿತೀಯ ಸ್ಥಾನ ಗಳಸಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಿ.ಎಂ.ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಪರ್ಲಿಯಾ, ಗುತ್ತಿಗೆದಾರರಾದ ಇಬ್ರಾಹೀಂ ಪರ್ಲಿಯಾ, ಹೈದರ್, ಸತ್ತಾರ್ ನಂದರಬೆಟ್ಟು, ಹೈದರ್ ಕಡ್ಪಿಕೆರೆ, ಶಾಲಾ ಮುಖ್ಯ ಶಿಕ್ಷಕಿ ಸುನೀತಾ, ಶಿಕ್ಷಕರು,ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.
Next Story





