ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಆ. 27: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು (ನಗರ) ವ್ಯಾಪ್ತಿಯ 8ನೆ ಬ್ಲಾಕ್ ಚೊಕ್ಕಬೆಟ್ಟು, 5ನೆ ಬ್ಲಾಕ್ ಯುವಕ ಮಂಡಲ, ಉರ್ವ ಚಿಲಿಂಬಿ ಸೇರಿದಂತೆ ಒಟ್ಟು 3 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸೆಸೆಲ್ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಜೋಡುಕಟ್ಟೆ ಮರೋಳಿ, ದಯಾಂಬು ಬೋರುಗುಡ್ಡೆ, ಸ್ನೇಹ ಬಳಗ ಕುಂಜತ್ತಬೈಲು, ಕಾಪಿಕಾಡ್-ಕದ್ರಿ, ಬದ್ರಿಯ ಶಾಲೆ ಬಂದರು, ಅರ್ಸುಲ- ಪೋರ್ಟ್ ವಾರ್ಡ್ ಒಟ್ಟು 6 ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೆ ತರಗತಿ (ಉತ್ತೀರ್ಣ) ಯಿಂದ 9ನೆ ತರಗತಿ ಉತ್ತೀರ್ಣ ವಿದ್ಯಾಭ್ಯಾಸವುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಎಲ್ಲಾ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು ಅರ್ಜಿ ಸಲ್ಲಿಸಲು ಸೆ.16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಲ್ವಾ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇಲ್ಲಿ ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟನೆ ತಿಳಿಸಿದೆ.