ಮೂಡುಬಿದಿರೆ : ಸದ್ಭಾವನಾ ದಿನ ಆಚರಣೆ

ಮೂಡುಬಿದಿರೆ,ಆ.27: ಶ್ರೀ ಮಹಾವೀರ ಪದವಿ ಕಾಲೇಜಿನ ರೇಂಜರ್ಸ್ ಹಾಗೂ ಪದವಿಪೂರ್ವ ಕಾಲೇಜಿನ ರೇಂಜರ್ಸ್, ಎನ್.ಎಸ್.ಎಸ್ ಮತ್ತು ರೋವರ್ಸ್ ಘಟಕಗಳ ಸಹಯೋಗದಲ್ಲಿ ಕೋಮು ಸೌಹಾರ್ದತಾ ಸಪ್ತಾಹದ ಅಂಗವಾಗಿ ಸದ್ಭಾವನಾ ದಿನವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಧವಲಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಅಜಿತ್ ಪ್ರಸಾದ್ ‘ಮಾನವೀಯ ಜೀವನದ ಮೌಲ್ಯಗಳು’ ಎಂಬ ವಿಷಯವಾಗಿ ಮಾತನಾಡಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಕಾಲೇಜಿನ ರೇಂಜರ್ಸ್ ಅಧಿಕಾರಿ ರಿಯೋನಾ ಪ್ರೀಮಾ ರೇಗೊ, ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಗೀತಾ ರಾಮಕೃಷ್ಣ, ರೇಂಜರ್ಸ್ ಅಧಿಕಾರಿ ಸುಪ್ರೀತಾ ಮತ್ತು ರೋವರ್ಸ್ ಅಧಿಕಾರಿ ಪ್ರದೀಪ್ ಉಪಸ್ಥಿತರಿದ್ದರು. ರಾಯ್ಸ್ಟನ್ ಸ್ವಾಗತಿಸಿ, ಗಗನ ಆರ್. ವಂದಿಸಿದರು. ವಿಲ್ಮಾ ಕಾರ್ಯಕ್ರಮ ನಿರ್ವಹಿಸಿದರು.
Next Story





