ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾಟ

ಮೂಡುಬಿದಿರೆ,ಆ.27 : ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಬ್ಯೂರೋ ವೆರಿಟಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಇದರ ಮೆಕ್ಯಾನಿಕಲ್ ಇಂಜಿನಿಯರ್ ಪುನೀತ್ ಬಲ್ಲಾಳ್ ಉದ್ಘಾಟಿಸಿದರು.
ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್‍ರವರ ಅಧ್ಯಕ್ಷತೆಯಲ್ಲಿ ನಡೆದ ಈ ಪಂದ್ಯಾಟದ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್, ಎ.ಜಿ.ಸೋನ್ಸ್ ಐಟಿಐ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ್ ಮತ್ತು ವಿದ್ಯಾರ್ಥಿ ನಾಯಕ ಅಶ್ವಿತ್ ಜೀವನ್ ರಾಡ್ರಿಗಸ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜ್ ಪ್ರಸಾದ್ ವಂದಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದಲ್ಲಿ ನಡೆದ ಈ ಪಂದ್ಯಾಟದಲ್ಲಿ ಏಳು ಪದವಿಪೂರ್ವ ಕಾಲೇಜಿನ ಬಾಲಕರ ತಂಡಗಳು ಮತ್ತು ಆರು ಬಾಲಕಿಯರ ತಂಡಗಳು ಭಾಗವಹಿದ್ದವು. ಬಾಲಕರ ವಿಭಾಗದಲ್ಲಿ ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜು ಪ್ರಥಮ ಬಹುಮಾನವನ್ನು ಹಾಗೂ ಅತಿಥೇಯ ಮಹಾವೀರ ಕಾಲೇಜು ದ್ವಿತೀಯ ಬಹುಮಾನವನ್ನು ಗಳಿಸಿದವು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನವನ್ನೂ, ಜೈನ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.







