ಲವ್‍ಜಿಹಾದ್ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ: ಕೇರಳ ಡಿಜಿಪಿ

ಕೊಚ್ಚಿ,ಆ. 27: ಕೇರಳದಲ್ಲಿ ಲವ್‍ಜಿಹಾದ್ ಕುರಿತ ಆರೋಪಗಳಿದ್ದರೂ ಈವರೆಗೆ ಯಾವುದೇ ಲವ್‍ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹ್ರ ಹೇಳಿದ್ದಾರೆ. ಕೇರಳದಲ್ಲಿ ಲವ್‍ಜಿಹಾದ್ ಇದೆ ಎನ್ನುವ ರೀತಿಯಲ್ಲಿ ಆಂಗ್ಲಭಾಷೆಯ ದೈನಿಕಗಳು ವರದಿ ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಡಿಜಿಪಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಬೇರೆ ಬೇರೆ ಧರ್ಮೀಯರ ನಡುವೆ ಮದುವೆ ನಡೆಯುತ್ತಲೆ ಇರುತ್ತವೆ. ಇವುಗಳಲ್ಲಿ ಲವ್‍ಜಿಹಾದ್‍ಗೆ ಸಂಬಂಧಪಟ್ಟ ಎರಡು ಪ್ರಕರಣಗಳನ್ನು ತನಿಖೆಮಾಡಲಾಯಿತು. ಮಾತ್ರವಲ್ಲ ಸುಪ್ರೀಂಕೋರ್ಟಿನ ಆದೇಶದ ಪ್ರಕಾರ ಎನ್‍ಐಎ(ರಾಷ್ಟ್ರೀಯ ತನಿಖಾ ದಳ) ಕೂಡಾ ತನಿಖೆ ನಡೆಸುತ್ತಿದೆ. ಇದರ ನಿಜಸ್ಥಿತಿ ಅರಿಯಲು ತನಿಖೆಗಳು ಪೂರ್ಣಗೊಳ್ಳಬೇಕಾಗಿದೆ ಎಂದು ಬೆಹ್ರಾ ಹೇಳಿದರು.
Next Story





