ಕ್ಯಾಪ್ಟನ್ ರಾಜೇಂದ್ರಗೆ ಐಎಎಸ್ ಶ್ರೇಣಿಗೆ ಭಡ್ತಿ
ಬೆಂಗಳೂರು, ಆ. 27: ಕಂದಾಯ ಇಲಾಖೆಯಲ್ಲಿ ಹೊಸ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ರಚಿಸಿರುವ ವಿಶೇಷ ಕೋಶದ ನಿರ್ದೇಶಕರಾಗಿರುವ ಕೆಎಎಸ್ ಅಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಐಎಎಸ್ ಶ್ರೇಣಿಗೆ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ ಬೆಂಗಳೂರು ಪೀಠದ ಆದೇಶದ ಹಿನ್ನೆಲೆಯಲ್ಲಿ 2013ರಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ್ದ ಕೆಎಎಸ್‌ನಿಂದ ಐಎಎಸ್‌ಗೆ ಭಡ್ತಿ ಹೊಂದಿದವರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
Next Story





