ಸೆ.1ಕ್ಕೆ ‘ಸಿಲೋನ್ ಸೈಕಲ್’ ಕೃತಿ ಲೋಕಾರ್ಪಣೆ
ಬೆಂಗಳೂರು, ಆ.27: ಲೇಖಕ ಕನಕರಾಜ್ ಆರನಕಟ್ಟೆರವರ ‘ಸಿಲೋನ್ ಸೈಕಲ್’ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ಸೆ.1ರಂದು ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಕತೆಗಾರ ಕುಂ.ವೀರಭದ್ರಪ್ಪ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಡಾ.ರಾಜೇಂದ್ರ ಚೆನ್ನಿ ವಹಿಸಿಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಡಿ.ನರಸಿಂಹಮೂರ್ತಿ, ಸಿನಿಮಾ ನಟ ಕಿಶೋರ್ ಭಾಗಹಿಸಲಿದ್ದಾರೆ. ಪಲ್ಲವ ಪ್ರಕಾಶ ಹಾಗೂ ಜೆನ್ ಸೆಂಟರ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Next Story





