ಯುವತಿಯನ್ನು ಅಪಹರಿಸಿ ಅತ್ಯಾಚಾರ: ಓರ್ವ ಬಂಧನ

ಬೆಂಗಳೂರು, ಆ.27: ವ್ಯಕ್ತಿಯೊಬ್ಬ ಯುವತಿಯನ್ನು ಅಪಹರಿಸಿ ಬಲವಂತವಾಗಿ ತಾಳಿಕಟ್ಟಿ ಅತ್ಯಾಚಾರ ನಡೆಸಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ಇಸ್ತ್ರೀ ಅಂಗಡಿ ನಡೆಸುತ್ತಿರುವ ಸಂತೋಷ್(34) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಈತ ಪತ್ನಿ ಮಕ್ಕಳನ್ನು ತೊರೆದಿದ್ದು, ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದ ಯುವತಿಯ ಕಣ್ಣಿಟ್ಟು ಮದುವೆ ಮಾಡಿಕೊಡುವಂತೆ ಆಕೆಯ ತಂದೆ, ತಾಯಿಗೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಆರೋಪಿ ಸಂತೋಷ್ ಯುವತಿಯನ್ನು ಅಪಹರಿಸಿ ತಾಳಿ ಕಟ್ಟಿ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಂಬಂಧ ಯುವತಿ ಮತ್ತು ಆಕೆಯ ಪೋಷಕರಿಂದ ಹೇಳಿಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
Next Story





