ಎಸ್ಪಿಗೆ ಎಸ್‍ಡಿಪಿಐಯಿಂದ ಅಭಿನಂದನೆ

ಮಡಿಕೇರಿ,ಆ.27 : ರಾಷ್ಟ್ರಪತಿ ಪದಕ ಪಡೆದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರನ್ನು ಎಸ್‍ಡಿಪಿಐ ಹಾಗೂ ಪಿಎಫ್‍ಐ ಪ್ರಮುಖರು ಎಸ್ಪಿ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಇದೇ ಸಂದರ್ಭ ಮಡಿಕೇರಿಯ ನೂತನ ಡಿವೈಎಸ್‍ಪಿ ಕೆ.ಎಸ್.ಸುಂದರ ರಾಜ್ ಅವರನ್ನು ಕೂಡ ಭೇಟಿಯಾದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹಿಸಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ವಕೀಲ ಅಬೂಬಕ್ಕರ್ ಮತ್ತಿತರರು ಹಾಜರಿದ್ದರು.
Next Story





