ಪುತ್ತೂರು : ದರೋಡೆ ಪ್ರಕರಣ ; ಆರೋಪಿ ಬಂಧನ

ಪುತ್ತೂರು,ಆ.27; ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಬೈಕ್ ಹಾಗೂ ಮೊಬೈಲ್ ಸೇರಿದಂತೆ ನಗದು ಹಣವನ್ನು ದರೋಡೆ ಮಾಡಿದ ಆರೋಪದ ಮೇಲೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ರವೀಂದ್ರ ಶೆಟ್ಟಿಯವರ ಪುತ್ರ ಸೂರಜ್ ಶೆಟ್ಟಿ(22) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಆಗಸ್ಟ್ 24 ರಂದು ಈ ಘಟನೆ ನಡೆದಿದ್ದು, ವಿಶ್ವನಾಥ್ ಎಂಬವರಿಗೆ ಸೇರಿದ ಬೈಕ್, ಮೊಬೈಲ್,ಸಿಮ್ ಹಾಗೂ ನಗದು ಹಣ ಸೇರಿ ಸುಮಾರು ರೂ. 40 ಸಾವಿರ ಮೌಲ್ಯದ ವಸ್ತುಗಳನ್ನು ಆರೋಪಿ ದೋಚಿದ್ದು, ಈತನ ವಿರುದ್ಧ ನಗರಠಾಣೆಗೆ ದೂರು ನೀಡಲಾಗಿತ್ತು.
ಆರೋಪಿಯನ್ನು ಭಾನುವಾರ ಮುಂಜಾನೆ ದರ್ಭೆಯ ಪತ್ರಾವೊ ಸರ್ಕಲ್ ಹತ್ತಿರ ಬಂಧಿಸಿದ್ದು, ಈ ಕಾರ್ಯಾಚರಣೆಯಲ್ಲಿ ಪುತ್ತೂರು ನಗರಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕ್ರೈಂ ಎಸ್.ಐ ವೆಂಕಟೇಶ್ ಭಟ್, ಪೊಲೀಸ್ ಸಿಬ್ಬಂದಿಗಳಾದ ಸ್ಕರಿಯ, ಪ್ರಶಾಂತ್ ರೈ ಹಾಗೂ ಕೃಷ್ಣಪ್ಪ ಭಾಗವಹಿಸಿದ್ದರು.
Next Story





