ರಾಜ್ಯ ಸರಕಾರ ಜನತೆಗೆ ಸ್ಥಿರವಾದ ಆಡಳಿತ ನೀಡಿದೆ: ಸಂಸದ ದ್ರುವನಾರಾಯಣ

ಹನೂರು, ಆ.27: ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹನೂರು ವಿಧಾನ ಸಬಾಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 34 ಡಾ.ಬಾಬು ಜಗ ಜೀವನರಾಮ್ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಸದ ಆರ್.ದ್ರುವನಾರಾಯಣ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಳ್ಳಿ ಜಿಲ್ಲಾ ಪಂಚಾಯತ್ ನ ಬೈಲೂರು ಹಾಗೂ ಹುಣಸೇಪಾಳ್ಯ ಗ್ರಾಮಗಳಲ್ಲಿ ಬಾಬು ಜಗಜೀವನರಾಮ್ ಸಮುದಾಯ ಭವನಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ತಿಂಗಳಲ್ಲಿ ಹನೂರು ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಬಾಬು ಜಗ ಜೀವನರಾಮ್ ಭವನವನ್ನುಉದ್ಘಾಟನೆ ಮಾಡಲಾಯಿತು.ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾರು 6 ಕೋಟಿ ರೂ. ಅನುದಾನದಲ್ಲಿ 34 ಸಮುದಾಯ ಭವನಗಳು ನಿರ್ಮಾಣಗೂಳ್ಳುತ್ತಿವೆ . ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡುವ ಮೂಲಕ ಜನರಿಗೆ ಸ್ಥಿರವಾದ ಆಡಳಿತವನ್ನು ನೀಡಿದೆ ಎಂದು ತಿಳಿಸಿದರು .
ಸುಮಾರು 1 0ಲಕ್ಷ ರೂ. ವೆಚ್ಚದಲ್ಲಿ ದಾಸ್ತಾನು ಮಳಿಗೆ ನಿರ್ಮಾಣ: ಚಾಮರಾಜನರಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೋಜನೆಯಡಿಯಲ್ಲಿ ಲೋಕ್ಕನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10ಲಕ್ಷ ರೂ. ವೆಚ್ಚದಲ್ಲಿ ಈರುಳ್ಳಿ ದಾಸ್ತಾನು ಮಾಡುಲು ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇಂದು ಈ ಕಾಮಗಾರಿಗೂ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಸವರಾಜು, ಸದಸ್ಯರುಗಳಾದ ಮರಗದಮಣಿ, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ಮಲೈಮಹದೇಶ್ವರ ಬೆಟ್ಟದ ಪ್ರಾಧಿಕಾರದ ನಾಮನಿರ್ದೇಶಕ ಕೋಪ್ಪಳಿ ಮಹದೇವ್ , ನಾಯಕ ಗ್ರಾಪಂ ಅಧ್ಯಕ್ಷ ರಂಗ ಶೆಟ್ಟಿಕೆಂಪಯ್ಯ, ಪುಟ್ಟರಾಜು, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಮುಖಂಡರಾದ ಕೃಷ್ಣ ,ರವಿ , ಪ್ರತಾಪ್ ಮತ್ತಿತರರಿದ್ದರು.







