ಭೂಮಿಯನ್ನು ಶೋಷಣೆ ಮಾಡಿದರೇ ಮನುಷ್ಯಕುಲ ಸರ್ವನಾಶ: ಸೀತಾರಾಮ್ ಕೆದಿಲಾಯರ್ ಆತಂಕ
.jpg)
ಹಾಸನ,ಆ.27: ಭೂಮಿಯನ್ನು ಶೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮನುಷ್ಯಕುಲವೇ ಸರ್ವನಾಶವಾಗಬಹುದು ಎಂದು ಆರ್.ಎಸ್.ಎಸ್. ಹಿರಿಯ ಪ್ರಚಾರಕ ಶ್ರೀ ಸೀತಾರಾಮ್ ಕೆದಿಲಾಯರ್ ಆತಂಕ ವ್ಯಕ್ತಪಡಿಸಿದರು.
ನಗರದ ಶ್ರೀ ಶಂಕರಮಠದ ಆವರಣ, ಶ್ರೀ ಭಾರತೀ ತೀರ್ಥ ಕೃಪಾದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಸತ್ಯ ಮತ್ತು ಅಸತ್ಯ ಎರಡನ್ನು ತಿಳಿಯಪಡಿಸಬೇಕು. ಯಾವುದೂ ಸತ್ಯವೂ ಅದು ನಿತ್ಯ. ಎರಡು ಸೇರಿದರೇ ಅದು ನಮ್ಮ ಭಾರತ. ಜಗತ್ತಿನ ಎಲ್ಲಾ ಜನ ಜೀವಿಸುತ್ತಿರುವುದು ಭೂಮಿ ಮೇಲೆ ಎಂಬುದನ್ನು ಮರೆಯಬಾರದು.
ಭೂಮಿ ಎಂಬುದು ನಮ್ಮೆಲ್ಲರ ತಾಯಿ. ಆಕೆಯ ಮಕ್ಕಳು ನಾವೆಲ್ಲಾ ಎಂದರು. ಆಕೆಯ ಮೇಲೆ ಶೋಷಣೆ ಮಾಡುವುದನ್ನು ಬಿಟ್ಟು ಪೋಷಣೆ ಮಾಡುವುದನ್ನು ಕಲಿತರೇ ಮುಂದಿನ ಜನಾಂಗಕ್ಕೆ ಉತ್ತಮ ವಾತವರಣ ಕೊಡಬಹುದು. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೇ ಹಳ್ಳಿಗಳನ್ನು ಮೊದಲು ಪೋಷಿಸಬೇಕು. ತಾಯಿಯನ್ನು ರಕ್ಷಣೆ ಮಾಡಿದರೇ ನಮ್ಮನ್ನು ರಕ್ಷಣೆ ಮಾಡಿಕೊಂಡಂತೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರಮಠದ ಸಮಿತಿ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಹರಿಹರಪುರ ಶ್ರೀಧರ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ನಗರ ಸಹ ಪ್ರಭಾರಿ ಗಿರೀಶ್, ಕಟ್ಟಾಯ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.







