ದ.ಕ.: ಚುರುಕುಗೊಂಡ ಮಳೆ
ಮಂಗಳೂರು, ಆ. 27: ಕಳೆದ ಕೆಲವು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಶನಿವಾರ ಜಿಲ್ಲೆಯಾದ್ಯಂತ ಬಂಟ್ವಾಳ 8.3 ಮಿ.ಮೀ., ಬೆಳ್ತಗಂಡಿ 22.5, ಮಂಗಳೂರು 8.3, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ತಲಾ 15.5 ಮಳೆ ಪ್ರಮಾಣ ವರದಿಯಾಗಿದೆ. ಆದರೆ, ರವಿವಾರದ ವರದಿಯಂತೆ ಬಂಟ್ವಾಳ 54.8 ಮಿ.ಮೀ., ಬೆಳ್ತಂಗಡಿ 71.8 ಮಿ.ಮೀ., ಮಂಗಳೂರು 74.8 ಮಿ.ಮೀ., ಪುತ್ತೂರು 53.4 ಮಿ.ಮೀ. ಹಾಗೂ ಸುಳ್ಯ 67.4 ಮಿ.ಮೀ. ಮಳೆ ಪ್ರಮಾಣ ವರದಿಯಾಗಿದೆ.
ಕಳೆದ ವರ್ಷದ ಆಗಸ್ಟ್ 25ರವರೆಗೆ ಜಿಲ್ಲೆಯಾದ್ಯಂತ 499.7 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷದ ಆಗಸ್ಟ್ 25ರವರೆಗೆ 565.3 ಮಳೆ ವರದಿಯಾಗಿದೆ. ಕಳೆದ ವರ್ಷದ ಜನವರಿ ತಿಂಗಳಿನಿಂದ ಆ.25ರವರೆಗೆ 2528.0 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷದಲ್ಲಿ ಜನವರಿಯಿಂದ ಆಗಸ್ಟ್ 25ರವರೆಗೆ 2428.8 ಮಳೆ ಪ್ರಮಾಣ ವರದಿಯಾಗಿದೆ.
Next Story





