ರಾಜ್ಯದ ಆರು ಕಡೆ ಮೋಡ ಬಿತ್ತನೆ

ಬೆಂಗಳೂರು, ಆ. 27: ಕೃತಕ ಮಳೆ ಬರಿಸುವ ಉದ್ದೇಶದಿಂದ ರಾಜ್ಯ ಸರಕಾರ ಕೈಗೊಂಡಿರುವ ಮೋಡ ಬಿತ್ತನೆ (ಪ್ರಾಜೆಕ್ಟ್ ವರ್ಷಧಾರೆ) ಯೋಜನೆಯಂತೆ ಮಂಡ್ಯ ಜಿಲ್ಲೆ ಮಳವಳ್ಳಿ, ಕನಕಪುರ, ಕೋಲಾರ ನಗರದಿಂದ ಹತ್ತು ಕಿ.ಮೀ ದೂರದಲ್ಲಿ ಮತ್ತು ನೆಲಮಂಗಲ ಸೇರಿ ಆರು ಕಡೆಗಳಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಯಿತು.
ರವಿವಾರ ಮಧ್ಯಾಹ್ನ 3:12ಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಅಮೆರಿಕದ ವಿಶೇಷ ವಿಮಾನ ತನ್ನ ಕಾರ್ಯಾಚರಣೆ ಆರಂಭಿಸಿತು. ಸಂಜೆ 5:17ಕ್ಕೆ ಮೋಡ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ ವಿಮಾನ ವಾಪಸ್ ಧರೆಗಿಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.
Next Story





