ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಬೆಳ್ಳಿಯ ನಗೆ ಬೀರಿದ ಸಿಂಧು

ಗ್ಲಾಸ್ಗೋ, ಆ.27: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಪಿ.ವಿ.ಸಿಂಧು ಅವರು ಇಂದು ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನ ಫೈನಲ್‌ನಲ್ಲಿ ಸೋಲು ಅನುಭವಿಸಿ, ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಜಪಾನ್‌ನ ನೊಜೊಮಿ ಓಕುಹರ ವಿರುದ್ಧ 19-21, 22-20, 20-22 ಅಂತರದಲ್ಲಿ ಸೋತು ಮೊದಲ ಬಾರಿ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ಎರಡು ಬಾರಿ ಕಂಚು ಜಯಿಸಿರುವ ಸಿಂಧು ಅವರು ಇದೀಗ ಮೊದಲ ಬಾರಿ ಬೆಳ್ಳಿ ಪಡೆದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೂರನೆ ಪದಕ ಪಡೆದಿದ್ದಾರೆ.
Next Story





