ಸ್ಪೇನ್: ವಾಹನ ದಾಳಿಯಲ್ಲಿ ಮೃತರ ಸಂಖ್ಯೆ 16ಕ್ಕೇರಿಕೆ

ಮ್ಯಾಡ್ರಿಡ್,ಆ.27: ಕಳೆದ ವಾರ ಸ್ಪೇನ್‌ನಲ್ಲಿ ನಡೆದ ಅವಳಿ ವಾಹನ ದಾಳಿಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಸಂಖ್ಯೆ 16ಕ್ಕೇರಿರುವುದಾಗಿ ಬಾರ್ಸಿಲೋನಾದಲ್ಲಿ ಸ್ಥಳೀಯಾಧಿಕಾರಿಗಳು ತಿಳಿಸಿದ್ದಾರೆ.
ವಾಹನ ದಾಳಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 51ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆಂದು ನಾಗರಿಕ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಸ್ಪೇನ್‌ನ ಬಾರ್ಸೆಲೋನಾ ನಗರದ ಲಾಸ್ ರಾಂಬ್ಲಾಸ್ ಪ್ರದೇಶ ಹಾಗೂ ಕ್ಯಾಂಬ್ರಿಲ್ಸ್‌ನ ವಿಹಾರಧಾಮದಲ್ಲಿ ಕಳೆದ ವಾರ ಭಯೋತ್ಪಾದಕರು ವಾಹನ ದಾಳಿಗಳನ್ನು ನಡೆಸಿದ್ದರು.
Next Story





