Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನುಣ್ಣನ್ನ ಬೆಟ್ಟ- ನಿಷ್ಠುರ ಕಣ್ಣುಗಳಲ್ಲಿ...

ನುಣ್ಣನ್ನ ಬೆಟ್ಟ- ನಿಷ್ಠುರ ಕಣ್ಣುಗಳಲ್ಲಿ ಸ್ಪಷ್ಟ ನಿಲುವುಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ28 Aug 2017 12:05 AM IST
share
ನುಣ್ಣನ್ನ ಬೆಟ್ಟ- ನಿಷ್ಠುರ ಕಣ್ಣುಗಳಲ್ಲಿ ಸ್ಪಷ್ಟ ನಿಲುವುಗಳು

ಇತ್ತೀಚಿನ ದಿನಗಳಲ್ಲಿ ವರ್ತಮಾನದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಅತ್ಯಂತ ನಿಷ್ಠುರವಾದಿ ಕಣ್ಣುಗಳಿಂದ ನೋಡುತ್ತಾ, ವಿಮರ್ಶಿಸುತ್ತಿರುವವರಲ್ಲಿ ರಾಜಾರಾಂ ತಲ್ಲೂರು ಅವರ ಹೆಸರು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ‘ನುಣ್ಣನ್ನ ಬೆಟ್ಟ’ ರಾಜಾರಾಂ ತಲ್ಲೂರು ಅವರ ವೆಬ್ ಅಂಕಣಗಳ ಸಂಗ್ರಹ. ಒಂದು ರೀತಿಯಲ್ಲಿ ಇದು ಅವರ ಚೊಚ್ಚಲ ಕೃತಿ. ಬೆನ್ನುಡಿಯಲ್ಲಿ ಸತೀಶ್ ಚಪ್ಪರಿಕೆಯವರು ಹೇಳುವಂತೆ, ಈ ಕೃತಿಯಲ್ಲಿ ಇರುವ ಬಹುತೇಕ ಬರಹಗಳು, ವರ್ತಮಾನಕ್ಕೆ ನೀಡಲಾದ ತಕ್ಷಣದ ಸ್ಪಂದನ. ಅದು ಚುಟುಕು ಬರಹಗಳ ರೂಪದಲ್ಲಿ. ಹಾಗೆ ನೋಡಿದಲ್ಲಿ ಇಲ್ಲಿನ ಪ್ರತಿಯೊಂದು ಚುಟುಕಿಗೂ ಪೂರ್ಣ ಪ್ರಮಾಣದ ಲೇಖನವಾಗುವ ಎಲ್ಲ ಅರ್ಹತೆಗಳಿವೆ. ಒಂದು ರೀತಿಯಲ್ಲಿ ಇದು ಬರಹಗಳ ಮಿತಿಯೂ ಹೌದು. ಆದರೆ ಇದೇ ಸಂದರ್ಭದಲ್ಲಿ, ವರ್ತಮಾನದ ತಕ್ಷಣದ ಅಗತ್ಯವೂ ಹೌದು. ಇಲ್ಲಿರುವ ಲೇಖನಗಳು ಪುಟ್ಟದಾದರೂ ಅದು ಓದುಗರಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯುವ ಶಕ್ತಿಯನ್ನು ತನ್ನದಾಗಿಸಿಕೊಂಡಿವೆ. ಈ ಲೇಖನಗಳು ಓದುಗನಲ್ಲಿ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ತಳೆಯಲು ಒತ್ತಾಯ ಹೇರದೆ, ಒಂದು ಅಭಿಪ್ರಾಯದ ಕಡೆಗೆ ಮುನ್ನಡೆಯಲು ಒಳನೋಟಗಳನ್ನು ಕೊಡುತ್ತವೆ. ಅದು ಈ ಕೃತಿಯ ಹೆಗ್ಗಳಿಕೆಯಾಗಿದೆ.

 ಕೃತಿಯಲ್ಲಿ ಜಿ. ಎನ್. ಮೋಹನ್ ಅವರು ಹೇಳುವಂತೆ ‘‘ರಾಜಾರಾಂ ಅವರ ಬರಹಗಳು ಸದ್ದಿಲ್ಲದೆ ಒಂದು ವೈಚಾರಿಕ ಭೂಮಿಕೆಯನ್ನು ಸಿದ್ಧಪಡಿಸಿವೆ. ಒಂದು ಹೋರಾಟಕ್ಕೆ ಬೇಕಾದ, ಸಮಾಜದ ಮುನ್ನಡೆಗೆ ಬೇಕಾದ ಸ್ಪಷ್ಟತೆಯನ್ನು ಕೊಡಲು ಪ್ರಯತ್ನಿಸಿದೆ’’. ಸಾಧಾರಣವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳ ಬಗ್ಗೆಯೇ ಚಿಂತಕರ ಟೀಕೆಗಳಿವೆ. ಅವುಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಲು ಹಿಂಜರಿಯುವವರೂ ಇದ್ದಾರೆ. ಪುಟಗಳ ಮಿತಿ, ವಾರಗಳ ಮಿತಿ, ಪ್ರಸ್ತುತತೆ ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಂಕಣಕಾರ ಪತ್ರಿಕಾ ಸಂಪಾದಕರ ಕೈಕೋಳದ ಜೊತೆಗೆ ಬರೆಯಬೇಕು ಎನ್ನುವ ಆರೋಪಗಳಿವೆ. ವೆಬ್ ಅಂಕಣಗಳ ಚೌಕಟ್ಟು ಅದಕ್ಕಿಂತಲೂ ಕಿರಿದಾದುದು. ಯಾಕೆಂದರೆ, ದೀರ್ಘವಾದಷ್ಟು ವೆಬ್‌ಗಳಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಅಳಲು ವೆಬ್ ಸಂಪಾದಕರದಾಗಿರುತ್ತದೆ. ಅದುದರಿಂದ ಕಿರಿದಾದುದರೊಳ್ ಹಿರಿದನ್ನು ಹೇಳುವ ಲೇಖಕರ ಹುಡುಕಾಟದಲ್ಲಿ ಇರುತ್ತಾರೆ.ತಲ್ಲೂರಿನ ಬರಹಗಳಲ್ಲಿ ಸಂಪಾದಕರಾದ ಮೋಹನ್ ಅವರು ಅಂತಹದೊಂದು ಶಕ್ತಿಯನ್ನು ಗುರುತಿಸಿದ್ದಾರೆ ಮತ್ತು ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಲ್ಲಿ ನೂರಕ್ಕೂ ಅಧಿಕ ಕಿರು ಲೇಖನಗಳು ನಮ್ಮಾಳಗೆ ಹಿರಿದಾದ ಚಿಂತನೆಯ ಬೀಜವನ್ನು ಬಿತ್ತಿ ಹೋಗುತ್ತವೆ. ಅದನ್ನು ನೀರು ಹಾಕಿ ಉಳಿಸಿ, ಬೆಳೆಸುವುದು ಓದುಗನ ಹೊಣೆಗಾರಿಕೆಯಾಗಿದೆ. 316 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಪ್ರೊ-ಡಿಜಿ ಮುದ್ರಣ, ಉಡುಪಿ ಇವರು ಈ ಕೃತಿಯನ್ನು ಪ್ರಕಟಿಸಿದ್ದಾರೆ.

share
-ಕಾರುಣ್ಯಾ
-ಕಾರುಣ್ಯಾ
Next Story
X