ಮಂಗಳೂರು : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು
ಮಂಗಳೂರು, ಆ.28: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದ ಮುಖೇನ ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿಯ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆಯನ್ನು ಸೆ.6ರ ಬೆಳಗ್ಗೆ 10:30ಕ್ಕೆ ನಗರದ ಎಂ.ಜಿ. ರಸ್ತೆಯಲ್ಲಿರುವ ಕೆನರಾ ಕಾಲೇಜಿನಲ್ಲಿ ಮ್ಮಿುಕೊಳ್ಳಲಾಗಿದೆ.
ಸ್ಪರ್ಧೆಯ ವಿವರಗಳು ಈ ಕೆಳಕಂಡಂತಿದೆ: ‘ಸ್ವಚ್ಛತೆಗಾಗಿ ನಾನು ಏನನ್ನು ಮಾಡಬೇಕು’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆನಡೆಯಲಿದೆ. 250 ಪದಗಳಿಗೆ ಮೀರದಂತಿರಬೇಕು, 250 ಪದಗಳನ್ನು ಮೀರಿದರೆ ಋಣಾತ್ಮಕ ಅಂಕವಿರುತ್ತದೆ, ಪ್ರಬಂಧ ಸ್ಪರ್ದೆಯ ಸಮಯಾವಕಾಶ 1 ಗಂಟೆಯಾಗಿರುತ್ತದೆ. ಹಿಂದಿ ಅಥವಾ ಇಂಗ್ಲಿಷ್ ಅಥವಾ ಕನ್ನಡ ಭಾಷೆಯಲ್ಲಿ ಪ್ರಬಂಧ ಮಂಡಿಸಬಹುದು. ಪ್ರತಿಯೊಂದು ಕಾಲೇಜು/ವಿದ್ಯಾಲಯ 3-4 ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಕಳುಹಿಸಬೇಕು.
ಕಿರು ಚಿತ್ರದ ವಿಷಯ : ನನ್ನ ದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನ ಪಾತ್ರ (ಕನ್ನಡ) ಕಾಲಾವಕಾಶ 2-3 ನಿಮಿಷ ಮಾತ್ರ. ಪ್ರತಿ ಅಭ್ಯರ್ಥಿಯು ಈ ಕಿರು ಚಿತ್ರವನ್ನು ಸ್ವತಃ ನಾನೇ ಮಾಡಿರುವೆನೆಂದು ಧೃಢೀಕರಣ ಪತ್ರ ನೀಡಬೇಕು. ಕಿರು ಚಿತ್ರವನ್ನು ಸಿಡಿ/ಪೆನ್‌ಡೈವ್ ನಲ್ಲಿ ಹೆಸರನ್ನು ನಮೂದಿಸಿ ನೀಡಬೇಕು. ಸ್ಪರ್ಧಾ ವಿಜೇತರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಹಾಗೂ ಉಳಿದ ಎಲ್ಲಾ ಸ್ಪರ್ಧಾಳುಗಳಿಗೆ ಭಾಗವಹಿಸುವಿಕೆ ಪತ್ರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ವಿಜೇತರಾದವರು ರಾಜ್ಯಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದ ವಿಜೇತರು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಆವರಣ, ಮಂಗಳೂರು (ದೂ.ಸಂ.:-0824-2422264) ಇವರಲ್ಲಿ ನೊಂದಾಯಿಸಬೇಕು ಎಂದು ಪ್ರಕಟನೆ ತಿಳಿಸಿದೆ.







