ಕೆಎಸ್ಸಾರ್ಟಿಸಿ ಶಿಶಿಕ್ಷು ತರಬೇತಿಗೆ ಸಂದರ್ಶನ
ಮಂಗಳೂರು, ಆ.28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ವಿವಿಧ ವೃತ್ತಿಗಳಲ್ಲಿ ಶಿಶಿಕ್ಷು ಪೂರ್ಣ ಅವಧಿಯ ಫಿಟ್ಟರ್, ಮೆಕ್ಯಾನಿಕ್ ಡೀಸೆಲ್, ಎಂ.ವಿ.ಬಿ.ಬಿ., ವೆಲ್ಡರ್, ಮೆಕ್ಯಾನಿಕ್ ಆಟೊ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ಆಟೊ ಮೊಬೈಲ್, ಪಾಸಾ ತರಬೇತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಛಿಸುವ ಎಸೆಸೆಲ್ಸಿ ಅಥವಾ ಐ.ಟಿ.ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಆ.29ರಂದು ಬೆಳಗ್ಗೆ 10 ಗಂಟೆಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದ.ಕ. ಜಿಲ್ಲೆ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ಪ್ರಕಟನೆ ತಿಳಿಸಿದೆ.
Next Story





