ಆ.29ರಂದು ಮುಲ್ಕಿಯಲ್ಲಿ ಬಕ್ರೀದ್ ಸಂದೇಶ
ಮಂಗಳೂರು, ಆ.28: ಸುರತ್ಕಲ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಬಕ್ರೀದ್ ಸಂದೇಶ ಕಾರ್ಯಕ್ರಮವು ಆ.29ರಂದು ಬೆಳಗ್ಗೆ 9:30ರಿಂದ 12 ಗಂಟೆಯವರೆಗೆ ಮುಲ್ಕಿಯ ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ನಡೆಯಲಿದೆ.
ಕೆ.ಸಿ. ರೋಡ್ ಇಬ್ರಾಹೀಂ ಬಾಖವಿ ಉಸ್ತಾದ್ ಅವರು ಉಳ್‌ಹಿಯತ್ ಎಂಬ ವಿಷಯದಲ್ಲಿ ತರಗತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರೇಂಜ್‌ಗೊಳಪಟ್ಟ ಮದ್ರಸ ಅಧ್ಯಾಪಕರಿಗೆ ಬಕ್ರೀದ್ ಕಿಟ್ ವಿತರಣೆ ನಡೆಯಲಿದೆ ಎಂದು ಸುರತ್ಕಲ್ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





