ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ,ಆ.28: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆಯಲ್ಲಿ ವಿಕಲಚೇತನರ ಸಬಲೀಕರಣ ಉದ್ದೇಶಕ್ಕಾಗಿ ವಿಕಲಚೇತನರಿಗೆ ಅವರು ಇರುವ ಪ್ರದೇಶದಲ್ಲಿಯೇ ಮಾಹಿತಿ ಹಾಗೂ ಸೌಲ್ಯಗಳನ್ನು ಒದಗಿಸುವ ಸಲುವಾಗಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಮಾಸಿಕ 3000ರೂ. ಗೌರವಧನದೊಂದಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿಆರ್‌ಡಬ್ಲು) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಠ ಶೇ.40ರಷ್ಟು ವಿಕಲತೆ ಹೊಂದಿದ್ದು, ವಿಕಲಚೇತನರ ಗುರುತು ಚೀಟಿ ಹೊಂದಿರುವ, ಹತ್ತನೇ ತರಗತಿ ಉತ್ತೀರ್ಣ/ಅನುತ್ತೀರ್ಣರಾದ, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ಆಸಕ್ತರಿರುವ ನಿರುದ್ಯೋಗಿ ವಿಕಲಚೇತನರು ವಿಆರ್‌ಡಬ್ಲು ನೇಮಕಾತಿ ಆಗದೇ ಇರುವ ಗ್ರಾಪಂನ ಪಿಡಿಓಗಳ ಶಿಫಾರಸು/ದೃಢೀಕರಣ ಪತ್ರದೊಂದಿಗೆ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಜಿಲ್ಲೆ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಾಪಂನಲ್ಲಿರುವ ಎಂಆರ್‌ಡಬ್ಲು ಅವರನ್ನು ಸಂಪರ್ಕಿಸಬಹುದು ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗಳ ಕಚೇರಿ ದೂರವಾಣಿ ಸಂಖ್ಯೆ: 0820-2574810/2574811ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.





