ಬಂಟ್ವಾಳ : ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಬಂಟ್ವಾಳ,ಆ.28: ಸಜಿಪ ಮುನ್ನೂರು ಗ್ರಾಮದ ಮಂಜಲ್ ಪಾದೆ ಎಂಬಲ್ಲಿ ದೇರಳಕಟ್ಟೆಯ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ನೀರಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದ್ದು, ಸೋಮವಾರ ಕೆಸರಿನಲ್ಲಿ ಹೂತಿದ್ದ ಮೃತದೇಹವನ್ನು ಗೂಡಿನಬಳಿಯ ಈಜು ತಜ್ಙರು ಮೇಲಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ನಿವಾಸಿ ದೇರಳಕಟ್ಟೆಯ ದಂತ ವೈದ್ಯಕೀಯ ಕಾಲೇಜಿನ ಅಂತಿಮ ತರಗತಿಯ ವಿದ್ಯಾರ್ಥಿ ಡೆನ್ನಿಸ್ ಬಾಬು ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಸಜೀಪ ಮೂನ್ನುರು ಗ್ರಾಮದ ಮಂಜಲ್ಪಾದೆ ಸಮೀಪದ ಅಂಬಡೆಬೈಲ್ ನದಿ ತೀರದಲ್ಲಿ ಕೇರಳ ಮೂಲದ ಎಸ್ಟೇಟ್ ಇದೆ.
ಐವರು ವಿದ್ಯಾರ್ಥಿಗಳು ರಜಾ ದಿನವನ್ನು ಕಳೆಯಲು ತಮ್ಮ ಸಂಬಂಧಿಕರ ಈ ಎಸ್ಟೇಟ್ ಗೆ ಬಂದಿದ್ದರು.ನದಿ ತೀರದಲ್ಲಿ ಆಳವಾದ ಕೆರೆ ಇದ್ದು, ನೀರಿನ ಅಪಾಯ ಅರಿಯದ ಯುವಕರು ನೀರಿನಲ್ಲಿ ಈಜಾಡುವ ವೇಳೆ ಡೆನ್ನಿಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ರಾತ್ರಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಕಾರ್ಯಚರಣೆ ನಡೆಸಿ ಬರಿಗೈಯಲ್ಲಿ ವಾಪಾಸಾಗಿದ್ದರು.
ಗೂಡಿನ ಬಳಿ ಈಜು ತಜ್ಞರ ಬಳಗದ ಸಾಹಸದಿಂದ ಕೆಸರಲ್ಲಿ ಹೂತ ಮೃತದೇಹ ವನ್ನು ಮೇಲೆಕ್ಕೆತ್ತಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಕೇಸ್ ದಾಖಲಿಸಿದ್ದು,ಮುಂದಿನ ತನಿಖೆ ಕೈಗೊಂಡಿದ್ದಾರೆ.







