ನಿಯಂತ್ರಣ ಕಳೆದುಕೊಂಡು ಹೋಟೆಲ್ ಹಾಗೂ ಗೂಡಂಗಡಿಗೆ ನುಗ್ಗಿದ ಬಸ್

ವಿಟ್ಲ,ಆ.28: ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಹೋಟೆಲ್ ಹಾಗೂ ಗೂಡಾಂಗಡಿಗೆ ನುಗ್ಗಿದ ಪರಿಣಾಮ ಎರಡು ಅಂಗಡಿಗಳು ಹಾನಿಗೊಂಡು ಹಲವು ಮಂದಿ ಪವಾಢ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ನಡೆದಿದೆ.
ಮಂಗಳೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಇನ್ನೊಂದು ಬಸ್ಸು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ರಸ್ತೆ ಬದಿಯಲ್ಲಿದ್ದ ಹೋಟೆಲ್ ಹಾಗೂ ಗೂಡಾಂಗಡಿಗೆ ನುಗ್ಗಿದೆ. ಇದರಿಂದ ಗಣೇಶ್ ಅವರ ಗೂಡಂಗಡಿ ಸಂಪೂರ್ಣವಾಗಿ ಹಾನಿಗೊಂಡರೆ, ನಿತ್ಯಾನಂದ ಎಂಬ ಹೋಟೆಲ್ ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿದ್ದಾರೆ.
Next Story





