ಮಂಡ್ಯ: ನೀರು ಪಾಲಾಗಿದ್ದ ಯುವಕನ ಶವ ಪತ್ತೆ

ಮಂಡ್ಯ, ಆ.28: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿದ್ದ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಯುವಕನ ಮೃತ ದೇಹವನ್ನು ಸೋಮವಾರ ಹೊರ ತೆಗೆಯಲಾಗಿಯಿತು.
ಗ್ರಾಮದ ಲೇಟ್ ಕಾಂತರಾಜು ಮಹದೇವಮ್ಮ ದಂಪತಿ ಪುತ್ರ ವಿಜಯ್‍ಕುಮಾರ್ (25) ರವಿವಾರ ತಡರಾತ್ರಿ ಗ್ರಾಮದ ಹೊರವಲಯದ ಕೆರೆಯಲ್ಲಿ ಗಣೇಶನ ವಿಸರ್ಜನೆ ವೇಳೆ ಮುಳುಗಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನೀರು ಪಾಲಾಗಿದ್ದ ಯುವಕನ ಮೃತದೇಹವನ್ನು ಅಗ್ನಿ ಶಾಮಕ ಸಿಬ್ಬಂದಿ ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿ ಹೊರತೆಗೆದರು.
ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಜತೆ ಕಾರ್ಯಾಚರಣೆ ನಡೆಸಿ ಸೋಮವಾರ ಬೆಳಗ್ಗೆ ಯುವಕನ ಮೃತ ದೇಹವನ್ನು ಹೊರತೆಗೆದು ಶವ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದರು.
Next Story





