ಬೈಕ್ ಢಿಕ್ಕಿ: ಅಪರಿಚಿತ ಸಾವು

ಮಂಗಳೂರು, ಆ. 28: ಬೈಕ್ ಢಿಕ್ಕಿಯಾಗಿ ಅಪರಿಚಿತ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಜಪ್ಪಿನಮೊಗರಿನಲ್ಲಿ ರವಿವಾರ ನಡೆದಿದೆ. ಬೈಕ್ ಸವಾರ ಸಿರಿಲ್ ಎಂಬವರ ಅಜಾಗರೂಕತೆಯ ಚಾಲನೆಯಿಂದ ಅವಘಡ ಸಂಭವಿಸಿದ್ದು, ಪಾದಚಾರಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾರೆ. ಮೃತರು 35-40 ವರ್ಷದೊಳಗಿನವರಾಗಿದ್ದು, ವಾರಸುದಾರರು ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
Next Story





