ಅಫ್ಘಾನ್: ಕಾರ್‌ಬಾಂಬ್ ಸ್ಫೋಟ; 13 ಸಾವು

ಕಾಬೂಲ್, ಆ. 28: ಅಫ್ಘಾನಿಸ್ತಾನದ ದಕ್ಷಿಣದ ಹೆಲ್ಮಂಡ್ ಪ್ರಾಂತದಲ್ಲಿ ರವಿವಾರ ಸಂಭವಿಸಿದ ಕಾರ್‌ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 18 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಅಫ್ಘಾನ್ ಸೈನಿಕರು ಮತ್ತು ನಾಗರಿಕರು ಸೇರಿದ್ದಾರೆ.
ಪ್ರಾಂತದ ಮಧ್ಯ ಭಾಗದಲ್ಲಿರುವ ನವ ಎಂಬ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ ದಾಳಿ ಸಂಭವಿಸಿದೆ ಎಂದು ಹೆಲ್ಮಂಡ್ ಗವರ್ನರ್‌ರ ವಕ್ತಾರ ಉಮರ್ ಝ್ವಾಕ್ ಸುದ್ದಿಗಾರರಿಗೆ ತಿಳಿಸಿದರು.
ನವ ಜಿಲ್ಲೆಯನ್ನು ತಾಲಿಬಾನ್ ನಿಯಂತ್ರಣದಿಂದ ಜುಲೈ ತಿಂಗಳಲ್ಲಿ ಮರುವಶಪಡಿಸಿಕೊಂಡಿದ್ದು, ಅಂದಿನಿಂದ ಅಲ್ಲಿ ನಿರಂತರ ಕಾಳಗ ನಡೆಯುತ್ತಿದೆ ಎಂದು ಅಫ್ಘಾನ್ ಪಡೆಗಳು ಹೇಳಿವೆ.
Next Story





