ದಾಳಿ ಹೆಲಿಕಾಪ್ಟರ್ ಖಾಸಗೀಕರಣಕ್ಕೆ ಸೇನೆ ಉತ್ಸುಕ

ಹೊಸದಿಲ್ಲಿ, ಆ. 28: ಭಾರತೀಯ ಸೇನೆಗೆ ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಮಂಜೂರು ಮಾಡಿದ ಬಳಿಕ, ಸೇನೆಗೆ ಇತರ ದಾಳಿ ಹೆಲಿಕಾಪ್ಟರ್‌ಗಳನ್ನು ಸೇರಿಸುವ ಯೋಜನೆ ಪ್ರಕ್ರಿಯೆಯಲ್ಲಿದೆ. ಈ ಸಾಹಸಕ್ಕೆ ಸಾರ್ವಜನಿಕ ವಲಯದ ಕಂಪೆನಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕೈ ಹಾಕಿದೆ.
ಆದಾಗ್ಯೂ, ಇಂತಹ ಹೆಲಿಕಾಪ್ಟರ್‌ಗಳ ವ್ಯಾಪಕ ಆಯ್ಕೆ, ಪ್ರಮುಖ ಬಿಡಿಭಾಗಗಳ ಆಮದು ಅವಲಂಬನೆಯ ಕಡಿತ ಹಾಗೂ ದೇಶದಲ್ಲೇ ದೀರ್ಘಾವಧಿ ಉತ್ಪಾದನೆ ಸಾಮರ್ಥ್ಯ ಹೊಂದಲು ಈ ಯೋಜನೆಯನ್ನು ಸೇನೆ ಖಾಸಗೀಕರಿಸಲಿದೆ.
ಭಾರತದಲ್ಲಿ ಎಚ್‌ಎಎಲ್ ಎಲ್ಲ ರೀತಿಯ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಚ್‌ಎಎಲ್ ಅಪಾಚೆ ಸಂಯೋಜನೆ, ನಿರ್ವಹಣೆ ಹಾಗೂ ದುರಸ್ಥಿಯ ಉಸ್ತುವಾರಿಯನ್ನೂ ತೆಗೆದುಕೊಳ್ಳಲಿದೆ. ಆದರೆ, ಎಚ್‌ಎಎಲ್‌ನ ಉತ್ಪಾದನಾ ಸಾಮರ್ಥ್ಯ ತುಂಬಾ ಕಡಿಮೆ.
Next Story





