ಚಿಕ್ಕಮಗಳೂರು: ವಿವಾಹಿತ ಮಹಿಳೆ ನಾಪತ್ತೆ

ಚಿಕ್ಕಮಗಳೂರು, ಆ.28: ನಗರದ ಗೌರಿ ಕಾಲುವೆ ಬಡಾವಣೆಯ ವಿವಾಹಿತ ಮಹಿಳೆಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರದ ಗೌರಿ ಕಾಲುವೆ ಬಡಾವಣೆಯ ವಾಟರ್ ಟ್ಯಾಂಕ್ ಬಳಿ ವಾಸಿ ಶಹನಾಜ್(26) ನಾಪತ್ತೆಯಾದ ಮಹಿಳೆ.
ಈಕೆ ಆ.21 ರಂದು ಮಧ್ಯಾಹ್ನದ ವೇಳೆ ತಾಲೂಕು ಕಚೇರಿಯಿಂದ ಅವರ ಅಣ್ಣ, ಅತ್ತಿಗೆ, ಭಾವ ಜತೆಯಲ್ಲಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದಾಗ ರಾಮನಹಳ್ಳಿ ಸರ್ಕಲ್ ಬಳಿ ಇಳಿದು ಹೋದವಳು ಮನೆಗೆ ಬಾರದೆ ಕಾಣೆಯಾಗಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆಯ ಪತಿ ತಿಳಿಸಿದ್ದಾರೆ.
Next Story





