ಅಕ್ರಮ ಜಾನುವಾರು ಸಾಗಾಟ: ಐದು ಜಾನುವಾರು ವಶ
ಹಿರಿಯಡ್ಕ, ಆ.28: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನು ವಾರುಗಳನ್ನು ಹಿರಿಯಡ್ಕ ಪೊಲೀಸರು ಆ.28ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ 41ಶೀರೂರು ಗ್ರಾಮಜ ಹರಿಖಂಡಿಗೆ ನೀರಪಲ್ಕೆ ಎಂಬಲ್ಲಿ ವಶ ಪಡಿಸಿಕೊಂಡಿದ್ದಾರೆ.
ಶಿರೂರಿನಿಂದ ಹರಿಖಂಡಿಗೆ ಕಡೆ ಹೋಗುತ್ತಿದ್ದ ಕ್ಸೈಲೋ ಕಾರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ನಿಲ್ಲಿಸಲು ಸೂಚಿಸಿದರು. ಆದರೆ ಚಾಲಕ ಕಾರನ್ನು ತೀರಾ ಎಡಕ್ಕೆ ತೆಗೆದ ಪರಿಣಾಮ ಕಾರು ಮುಂದಕ್ಕೆ ಹೋಗಿ ಚರಂಡಿಗೆ ಬಿತ್ತೆನ್ನ ಲಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡು ಪರಾರಿ ಯಾದರು.
ಬಳಿಕ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಐದು ಜಾನುವಾರುಗಳಿರುವುದು ಕಂಡುಬಂದಿದ್ದು, ಆರು ಲಕ್ಷ ರೂ. ವೌಲ್ಯದ ಕಾರು ಹಾಗೂ 20,300ರೂ. ಮೌಲ್ಯದ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





