ಗುರ್ಮೀತ್ ಶಿಕ್ಷೆಯ ತೀರ್ಪಿನಿಂದ ತೃಪ್ತಿ: ಅನ್‌ಶೂಲ್ ಛತ್ರಪತಿ

ಸಿರ್ಸ, ಆ.28: ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೀತ್ ಸಿಂಗ್‌ಗೆ ನೀಡಲಾಗಿರುವ ಶಿಕ್ಷೆಯ ಬಗ್ಗೆ ಅನ್‌ಶೂಲ್ ಛತ್ರಪತಿ ಸಂತೃಪ್ತಿ ಸೂಚಿಸಿದ್ದಾರೆ.
ಗುರ್ಮೀತ್ ಸಿಂಗ್ ನಡೆಸುತ್ತಿರುವ ಅಕ್ರಮ ,ಅವ್ಯವಹಾರ ಹಾಗೂ ಅನ್ಯಾಯದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಿದ ಕಾರಣಕ್ಕಾಗಿ ಕೊಲೆಯಾದ ಪತ್ರಕರ್ತ ರಾಮಚಂದ್ರ ಛತ್ರಪತಿಯ ಪುತ್ರನಾಗಿದ್ದಾರೆ ಅನ್‌ಶೂಲ್.
ಈ ವ್ಯಕ್ತಿ ಸಮಾಜಕ್ಕೆ ಒಂದು ಕಂಟಕ ಹಾಗೂ ವೈರಿಯಾಗಿದ್ದಾನೆ ಎಂದು ಸುದೀರ್ಘ ಸಮಯದಿಂದ ನಾವು ಹೇಳುತ್ತಾ ಬಂದಿದ್ದೇವೆ. ಇದೀಗ ಈ ವ್ಯಕ್ತಿ ತಪ್ಪಿತಸ್ಥ ಎಂದು ನ್ಯಾಯಾಂಗ ವ್ಯವಸ್ಥೆ ಮುದ್ರೆಯೊತ್ತಿದೆ. ಈ ಬಗ್ಗೆ ತೃಪ್ತಿಯಿದೆ ಎಂದು ಅನ್‌ಶೂಲ್ ತಿಳಿಸಿದ್ದಾರೆ. ಇವರ ತಂದೆ ರಾಮಚಂದ್ರ ಛತ್ರಪತಿ ಪತ್ರಕರ್ತನಾಗಿದ್ದರು.
ತನ್ನ ಮೇಲೆ ಗುರ್ಮೀತ್ ಸಿಂಗ್ ಅತ್ಯಾಚಾರ ಎಸಗಿದ್ದಾನೆ ಎಂದು ಡೇರಾ ಸಚ್ಚಾ ಸೌದದ ಸಾದ್ವಿಯೊಬ್ಬರು ನೀಡಿದ ದೂರಿನ ಕುರಿತಾದ ವರದಿಯನ್ನು 1999ರಲ್ಲಿ ಪ್ರಪ್ರಥಮವಾಗಿ ಪ್ರಕಟಿಸಿದ್ದರು ರಾಮಚಂದ್ರ. ಇದಾದ ಕೆಲವೇ ದಿನಗಳಲ್ಲಿ ಅವರನ್ನು ಕೊಲೆಗೈಯಲಾಗಿತ್ತು.ಅತ್ಯಾಚಾರ ಅಪರಾಧಕ್ಕಾಗಿ ಗುರ್ಮೀತ್ಗೆ 20 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.





