ಬ್ಲೂವೇಲ್ ಗೆ ಮತ್ತೋರ್ವ ಬಾಲಕ ಬಲಿ

ಲಕ್ನೊ, ಆ. 28: ಬ್ಲೂವೇಲ್ ಚಾಲೆಂಜ್‌ಗೆ ಮತ್ತೋರ್ವ ಬಾಲಕ ಬಲಿಯಾಗಿದ್ದಾನೆ. ವೌದಾಹ ಗ್ರಾಮದ 6ನೆ ತರಗತಿ ವಿದ್ಯಾರ್ಥಿ ಪಾರ್ಥ್ ಸಿಂಗ್ ತನ್ನ ಮನೆ ಕೊಠಡಿಯಲ್ಲಿ ರವಿವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
6ನೆ ತರಗತಿ ವಿದ್ಯಾರ್ಥಿ ಕೈಯಲ್ಲಿ ಆತನ ತಂದೆಯ ಮೊಬೈಲ್ ಫೋನ್ ಇತ್ತು. ಈ ಫೋನ್ ಮೂಲಕ ಬಂದ ನಿರ್ದೇಶನದಂತೆ 50 ಟಾಸ್ಕ್ ಪೂರೈಸಿದ ಬಳಿಕ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಾರ್ಥ್ ಬ್ಲೂವೇಲ್ ಚಾಲೆಂಜ್ ಗೇಮ್ ಆಡುತ್ತಿದ್ದ ಎಂದು ಹೆತ್ತವರು ತಿಳಿಸಿದ್ದಾರೆ.
ತಂದೆಯ ಅನುಪಸ್ಥಿತಿಯಲ್ಲಿ ತಂದೆಯ ಮೊಬೈಲ್ ಬಳಸಿ ಪಾರ್ಥ್ ಬ್ಲೂವೇಲ್ ಚಾಲೆಂಜ್ ಗೇಮ್ ಆಡುತ್ತಿದ್ದ. ಆ ಗೇಮ್ ಆಡದಂತೆ ಹೆತ್ತವರು ಪಾರ್ಥ್‌ಗೆ ಸಾಕಷ್ಟು ಸಲಹೆ ನೀಡಿದ್ದರು. ರವಿವಾರ ರಾತ್ರಿ ಆತ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.
Next Story





